• first
    second
    third
    previous arrow
    next arrow
  • ತಲೆಯ ಮೇಲೆ ಲಾರಿ ಹರಿದು ವ್ಯಕ್ತಿ ದುರ್ಮರಣ: ಚಾಲಕ ಪರಾರಿ

    300x250 AD

    ಹೊನ್ನಾವರ:ಪಟ್ಟಣದ ಗೇರುಸೊಪ್ಪ ವೃತ್ತದ ಬಳಿ ಲಾರಿ ಚಾಲಕನ ಅಜಾಗರೂಕ ಚಾಲನೆಯಿಂದ ಪಾದಚಾರಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ.

    ಹೊನ್ನಾವರದಿಂದ ಕುಮಟಾ ಕಡೆಗೆ ಅತೀ ವೇಗವಾಗಿ ಲಾರಿ ಚಲಾಯಿಸಿಕೊಂಡು ಬಂದ ಚಾಲಕ, ರಸ್ತೆಯ ಬದಿಯಲ್ಲಿ ಹೋಗುತ್ತಿದ್ದ ಪಟ್ಟಣದ ಚರ್ಚ್ ರೋಡ್ ನಿವಾಸಿಯಾದ ಸುಬ್ರಾಯ್ ಮಂಜು ಅಂಬಿಗ ಇವರಿಗೆ ಡಿಕ್ಕಿ ಹೊಡೆದು,ತಲೆಯ ಮೇಲೆ ಲಾರಿ ಹತ್ತಿಸಿಕೊಂಡು ಹೋದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    300x250 AD

    ಕೆ.ಎ. 29 ಡಬ್ಲ್ಯೂ.7814 ನೋಂದಣಿ ಸಂಖ್ಯೆಯ ವಾಹನವಾಗಿದ್ದು,ಅಪಘಾತವಾದ ನಂತರ ಚಾಲಕನು ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು, ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    Share This
    300x250 AD
    300x250 AD
    300x250 AD
    Back to top