ಶಿರಸಿ: ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯವು ಕಳೆದ ಸೆಪ್ಟೆಂಬರನಲ್ಲಿ ನಡೆಸಿದ ಬಿ.ಎಸ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಶಿರಸಿಯ ಭಾವನಾ ಸತ್ಯನಾರಾಯಣ ಹೆಗಡೆ ಕವಿವಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಧಾರವಾಡದ ಜೆ. ಎಸ್. ಎಸ್ ಕಾಲೇಜಿನ ವಿದ್ಯಾರ್ಥಿನಿ ಆಗಿದ್ದ ಭಾವನಾ ಹೆಗಡೆ ಅವಳು ಶಿರಸಿ ತಾಲೂಕಿನ ಶಿವಳ್ಳಿ ಶಾಲಾ ಶಿಕ್ಷಕ ದಂಪತಿಗಳಾದ ಭಾರತಿ ಲ. ಹೆಗಡೆ ಮುಂಡಗೇಸರ ಹಾಗೂ ಸತ್ಯನಾರಾಯಣ ಹೆಗಡೆ ಬರಗದ್ದೆ ಅವರ ಪುತ್ರಿ. ಈಕೆ ಬಿಎಸ್ಸಿ ಪರೀಕ್ಷೆಯಲ್ಲಿ ಶೇ. 95.39 ಅಂಕಗಳಿಸುವುದರ ಮೂಲಕ ಕವಿವಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಪ್ರಸ್ತುತ ಭಾವನಾ ಹೆಗಡೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಯೋಕೆಮಿಸ್ಟ್ರಿ ಯಲ್ಲಿ ಎಂ. ಎಸ್ಸಿ ಓದುತ್ತಿದ್ದು, ಚಂದನದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಾಗೂ ಶಿರಸಿ ಮಾರಿಕಾಂಬಾ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದಿದ್ದಳು ಎಂಬುದು ಉಲ್ಲೇಖನೀಯ.