• first
    second
    third
    previous arrow
    next arrow
  • ‘ಆರೋಗ್ಯ ಮೇಳ-2022’ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲು

    300x250 AD

    ಬೆಂಗಳೂರು: ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಆಯೋಜಿಸಿದ್ದ ‘ಆರೋಗ್ಯ ಮೇಳ 2022’ ವರ್ಲ್ಡ್ ಬುಕ್ ಅಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಬರೆದಿದೆ.

    ಸುಮಾರು 2.5 ಲಕ್ಷ ಮಂದಿ ಆರೋಗ್ಯ ಮೇಳದಲ್ಲಿ ನೋಂದಾಯಿಸಿಕೊಂಡು ಚಿಕಿತ್ಸೆ ಪಡೆದುಕೊಂಡಿದ್ದಾರೆ. 75 ಸಾವಿರಕ್ಕೂ ಹೆಚ್ಚು ಮಂದಿ ರಕ್ತದ ಮಾದರಿ ಶೇಖರಿಸುವ ಮೂಲಕ ದಾಖಲೆ ಬರೆದಿದ್ದಾರೆ.

    ಇದು ವಿಶ್ವದಲ್ಲಿ ಅತಿ ಹೆಚ್ಚು ಚಿಕಿತ್ಸೆ ಪಡೆದ ದಾಖಲೆಯಾಗಿದ್ದು, ಇದರ ಪ್ರಮಾಣ ಪತ್ರವನ್ನು ಆರೋಗ್ಯ ಮೇಳದ ವೇದಿಕೆಯಲ್ಲಿ ವಿತರಿಸಲಾಯಿತು ಎಂದು ಡಾ. ಸುಧಾಕರ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ

    300x250 AD

    ನಾನು ಉತ್ತಮ ಆರೋಗ್ಯ ಸೇವೆ ನೀಡಲು ಮೇಳ ಆಯೋಜಿಸಿದರೆ, ನನ್ನ ಜನ ನನಗೆ ದಾಖಲೆಯ ಗರಿ ಮುಡಿಸಿದ್ದಾರೆ. ನಾನು ಜನರ ಆರೋಗ್ಯಕ್ಕಾಗಿ ಏರ್ಪಡಿಸಿದ್ದ ಮೇಳದಲ್ಲಿ ಸುಮಾರು 2.5 ಲಕ್ಷ ಮಂದಿ ನೋಂದಾಯಿಸಿಕೊಂಡು, 75 ಸಾವಿರಕ್ಕೂ ಹೆಚ್ಚು ಮಂದಿಯ ರಕ್ತ ಮಾದರಿ ಶೇಖರಿಸುವ ಮೂಲಕ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತಾತ್ಕಾಲಿಕ ದಾಖಲೆ ಬರೆದಿದೆ” ಎಂದಿದ್ದಾರೆ.

    “ಇದು ವಿಶ್ವದಲ್ಲಿಯೇ ಅತಿ ಹೆಚ್ಚು ಚಿಕಿತ್ಸೆ ಪಡೆದ ದಾಖಲೆಯಾಗಿದ್ದು, ಇದರ ಪ್ರಮಾಣ ಪತ್ರವನ್ನು ಆರೋಗ್ಯ ಮೇಳದ ವೇದಿಕೆಯಲ್ಲಿಯೇ ವಿತರಿಸಲಾಯಿತು. ಈ ವೇಳೆ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು, ಶ್ರೀ ಬಿಎಲ್‌ ಸಂತೋಷ್‌ ಅವರು, ಎಂಟಿಬಿ ನಾಗರಾಜು ಉಪಸ್ಥಿತರಿದ್ದರು” ಎಂದಿದ್ದಾರೆ

    Share This
    300x250 AD
    300x250 AD
    300x250 AD
    Back to top