ಯಲ್ಲಾಪುರ: ತಾಲೂಕಿನ ಗುಳ್ಳಾಪುರ ಸಮೀಪದ ಹೆಗ್ಗಾರಿನ ಗುಡ್ಡೆಮನೆಯ ಸಮೃದ್ಧಿ ಮನೆಯಂಗಳದಲ್ಲಿ ಉದಯೋನ್ಮುಖ ಬರಹಗಾರ್ತಿ ಪಲ್ಲವಿ ಪ್ರಸನ್ನ ಭಟ್ಟರ ಎರಡು ಕೃತಿಗಳು ಮೇ 15, ರವಿವಾರ ಮಧ್ಯಾಹ್ನ 3ಗಂಟೆಗೆ ಬಿಡುಗಡೆಗೊಳ್ಳಲಿದೆ.
ಬೆಂಗಳೂರಿನ ಜಿಲ್ಲಾ ಸತ್ರನ್ಯಾಯಾಧೀಶರು,ಅವರ ಕಾನೂನು ಕಾರ್ಯದರ್ಶಿಗಳಾದ ನರಹರಿ ಪ್ರಭಾಕರ ಮರಾಠೆ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ, ವಿಮರ್ಶಕ ಹರಿನರಸಿಂಹ ಉಪಾಧ್ಯ ಬೆಂಗಳೂರು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹವ್ಯಾಸಿ ಬರಹಗಾರ ಎಲ್ ವಿ ಭಟ್ಟ, ಅಂಕೋಲಾ, ಪತ್ರಕರ್ತ ವಿಠ್ಠಲದಾಸ ಕಾಮತ್ ಭಾಗವಹಿಸಲಿದ್ದು, ವಿಶೇಷ ಆಹ್ವಾನಿತರಾಗಿ, ರಂಗನಟ, ಸಾಹಿತಿ,ಕಿರುತೆರೆ ಕಲಾವಿದ ,ಚಿಂತಕ ಎಸ್ ಎನ್ ಸೇತುರಾಮ್ ಸಾಹಿತ್ಯ ಸಂವಹನದ ಕುರಿತು ಮಾತನಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಪಲ್ಲವಿ ಪ್ರಸನ್ನರ 68 ಕವಿತೆಗಳ ‘ಭಾವಪಲ್ಲವಿ’ ಸಂಕಲನವನ್ನು ಮಧುಕೇಶವ ಭಾಗ್ವತ, ಮತ್ತು 89 ಗಜಲ್ ಗಳ ಭಾವದಲೆಗಳ ಮೌನಯಾನ ಕೃತಿಯನ್ನು ಯುವ ಬರಹಗಾರ್ತಿ ಸ್ಮಿತಾ ರಾಘವೇಂದ್ರ ಕಲ್ಲೇಶ್ವರ ಪರಿಚಯಿಸಿಕೊಡಲಿದ್ದಾರೆ.
ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಲೇಖಕಿ ಪಲ್ಲವಿ ಪ್ರಸನ್ನ ಪ್ರಕಟಣೆಯಲ್ಲಿ ಕೋರಿದ್ದಾರೆ.