ದಾಂಡೇಲಿ: ಸರಕು ತುಂಬಿದ ಲಾರಿಯೊಂದು ಹೂತುಹೋದ ಘಟನೆ ನಗರ ಸಮೀಪದ ಹಾಲಮಡ್ಡಿಯಲ್ಲಿ ಶುಕ್ರವಾರ ನಡೆದಿದೆ.
ನಗರದ ವೆಸ್ಟ್‍ಕೋಸ್ಟ್ ಕಾಗದ ಕಾರ್ಖಾನೆಗೆ ಪೋಲ್ಸ್ ತುಂಬಿಕೊಂಡು ಬರುತ್ತಿದ್ದ ಟ್ರಕ್ ಅನ್ನು ಚಹಾ ಕುಡಿಯುವ ಸಲುವಾಗಿ ದಾಂಡೇಲಿ- ಹಳಿಯಾಳ ಮುಖ್ಯ ರಸ್ತೆಯಲ್ಲಿ ಬರುವ ಹಾಲಮಡ್ಡಿಯ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದರು. ನಿಲ್ಲಿಸಿದ ಲಾರಿ ತಕ್ಷಣವೆ ಹೂತುಹೋಗಿದೆ.
ಚಾಲಕನ ಬದಿಯಲ್ಲಿರುವ ಚಕ್ರಗಳು ಹೂತುಹೋದ ಪರಿಣಾಮವಾಗಿ ಎಡಗಡೆಯ ಚಕ್ರಗಳು ಮೇಲಿವೆ. ಯಾವುದೇ ಸಂದರ್ಭದಲ್ಲಿ ಲಾರಿ ಪಲ್ಟಿಯಾಗುವ ಸಾಧ್ಯತೆಯಿರುವುದರಿಂದ ಲಾರಿಯ ಚಾಲಕ ಹಾಗೂ ಸ್ಥಳೀಯರು ಸೇರಿ ಕಂಬಗಳನ್ನು ಒರಗಿಸಿಟ್ಟು ಆಗಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ.