ಶಿರಸಿ: ಸಮೀಪದ ಶಿಂಗನಹಳ್ಳಿಯ ಯಕ್ಷಗಾನಪ್ರಿಯ ಲಕ್ಷ್ಮೀವೇಂಕಟೇಶ ದೇವರಿಗೆ ಭಕ್ತರು ಯಕ್ಷಗಾನ ಸೇವೆ ಸಲ್ಲಿಸುವದು ವಾಡಿಕೆ ಆಗಿದ್ದು, ಈ ಬಾರಿಯೂ ದೇವಸ್ಥಾನದ ಬಯಲು ರಂಗಮಂಟಪದಲ್ಲಿ ಶಬರ ಸಂಸ್ಥೆ ಸೋಂದಾ ಸಹಕಾರದಲ್ಲಿ ಮೇ 15ರಿಂದ 21ರ ತನಕ ಏಳು ದಿನಗಳ ಕಾಲ ಯಕ್ಷಗಾನ ಬಯಲಾಟ ನಡೆಯಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಶ್ರೀ ಲಕ್ಷ್ಮೀವೇಂಕಟೇಶ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಊರವರು ಸಹಕಾರ ನೀಡಲಿದ್ದಾರೆ. ಏಳೂ ದಿನ ಪೌರಾಣಿಕ್ಯ ಆಖ್ಯಾನಗಳು ಪ್ರದರ್ಶನ ಆಗಲಿದೆ. ೧೫ರಂದು ರಾತ್ರಿ ೯-೩೦ ಕ್ಕೆ ಸಪ್ತಾಹದ ಉದ್ಘಾಟನೆ ನಡೆಯಲಿದ್ದು,ಅಧ್ಯಕ್ಷತೆಯನ್ನು ತಟ್ಟೀಸರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಜಿ ಟಿ ಹೆಗಡೆ ತಟ್ಟೀಸರ, ಉದ್ಘಾಟಕರಾಗಿ ಜಿಲ್ಲೆಯ ಪ್ರತಿಷ್ಟಿತ ಬ್ಯಾಂಕ್ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನಮನೆ, ಮುಖ್ಯ ಆಮಂತ್ರಿತರಾಗಿ ಊರ ಹಿರಿಯರಾದ ವಿ.ಎಸ್ ಹೆಗಡೆ ಹಲ್ಲುಸರಿಗೆ, ಸುಬ್ರಾಯ ಹೆಗಡೆ ಶಿಂಗನಹಳ್ಳಿ ಆಗಮಿಸಲಿದ್ದಾರೆ.
15ರಂದು ಮಾರುತಿ ಪ್ರತಾಪ, 16ಕ್ಕೆ ಶ್ರೀ ಕೃಷ್ಣ ವಿವಾಹ, 17ಕ್ಕೆ ವೀರಮಣಿ ಕಾಳಗ,18ಕ್ಕೆ ಸುದರ್ಶನ ವಿಜಯ, 19ಕ್ಕೆ ವೀರ ಅಭಿಮನ್ಯು, 20ಕ್ಕೆ ರಾಜಾ ರುದ್ರಕೋಪ, 21ಕ್ಕೆ ಪುತ್ರಕಾಮೇಷ್ಠಿ, ಶನೇಶ್ವರ ಆಂಜನೇಯ ಆಖ್ಯಾನಗಳು ನಡೆಯಡೆಯಲಿದೆ.
ಸಪ್ತಾಹದ ಸೇವಾಕರ್ತರಾಗಿ ಮಂಜುನಾಥ ಗ ಹೆಗಡೆ ದಾಸನಹೂಡ್ಲು, ನಾರಾಯಣ ಸುಬ್ರಾಯ ಹೆಗಡೆ,ಉಪೇಂದ್ರ ಪೈ ಸೇವಾ ಟ್ರಸ್ಟ ಅಧ್ಯಕ್ಷರಾದ ಉಪೇಂದ್ರ ಪೈ, ಗುರುಪಾದ ಹೆಗಡೆ ಜಾಡೀಮನೆ,ಸುರೇಶ್ಚಂದ್ರ ಹೆಗಡೆ ಕೆಶಿನಮನೆ, ಭುವನೇಶ್ವರಿ ನಾಗರಾಜ್ ಜೋಶಿ ಸೋಂದಾ, ಪ್ರಕಾಶ ಹೆಗಡೆ, ಮಹೇಶ ಹೆಗಡೆ ಹುಳಸೇಮಕ್ಕಿ ಮತ್ತು ಮನೆಯವರು, ಎಮ್ ಟಿ ಹೆಗಡೆ ಮತ್ತು ಎನ್ ಟಿ ಹೆಗಡೆ ತಟ್ಟೀಸರ ಇವರುಗಳು ಯಕ್ಷಗಾನ ಸೇವೆ ಸಲ್ಲಿಸುತ್ತಾರೆ.
ಏಳೂ ದಿನ ಸುಮಾರು ಐವತ್ತಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ.
ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ರಾಮಕೃಷ್ಣ ಹೆಗಡೆ ಹಿಲ್ಲೂರು, ಕೃಷ್ಣ ಭಾಗವತ ಕನಕನಳ್ಳಿ, ಶಂಕರ ಭಟ್ಟ ಬ್ರಹ್ಮೂರು, ಆನಂದು ಆಗೇರ, ಸತೀಷ ಹೆಗಡೆ ದಂಟಕಲ್, ನರಸಿಂಹ ಭಟ್ಟ ಹಂಡ್ರಮನೆ, ಶ್ರೀಪತಿ ಹೆಗಡೆ ಕಂಚೀಮನೆ, ಪ್ರಸನ್ನ ಹೆಗ್ಗಾರ್, ವಿಘ್ನೇಶ್ವರ
ಕೆಸರಕೊಪ್ಪ ಭಾಗವಹಿಸುವರು.
ಮುಮ್ಮೇಳದಲ್ಲಿ ಅಶೋಕ ಭಟ್ಟ ಸಿದ್ದಾಪುರ, ಸಂಜಯ ಬೆಳೆಯೂರು, ಶ್ರೀಪಾದ ಭಟ್ಟ ತಂಡೀಮನೆ,ಉದಯ ಕಡಬಾಳ, ಶ್ರೀಧರ ಹೆಗಡೆ ಚಪ್ಪರಮನೆ, ಭಾಸ್ಕರ ಗಾಂವ್ಕರ್ ಬಿದ್ರೆಮನೆ, ರಾಮಚಂದ್ರ ಹೆಗಡೆ ಜೋಗನಮನೆ, ನರೇಂದ್ರ ಅತ್ತೀಮುರುಡು, ಸದಾಶಿವ ಮಲವಳ್ಳಿ, ನಾಗರಾಜ್ ಕುಂಕಿಪಾಲ್, ಗಣಪತಿ ಭಟ್ಟ ಮುದ್ದಿನಪಾಲ್, ಸಂತೋಷ ಕಡಕಿನಬೈಲ್, ಪ್ರವೀಣ ತಟ್ಟೀಸರ, ಗಣಪತಿ ಬಾರೆ, ಮಹಬಲೇಶ್ವರ ಗೌಡ, ಅವಿನಾಶ ಕೊಪ್ಪ, ಶ್ರೇಯಾ ಮುಂಡಿಗೇಸರ ಮತ್ತಿತರರು ಭಾಗವಹಿಸಲಿದ್ದಾರೆ.
ಸಪ್ತಾಹದ ಸಂಯೋಜನೆಯನ್ನು ನಾಗರಾಜ್ ಜೋಶಿ ಸೋಂದಾ, ಪ್ರಕಾಶ ಹೆಗಡೆ ಹುಳಸೇಮಕ್ಕಿ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.