• Slide
  Slide
  Slide
  previous arrow
  next arrow
 • ಮಿಶ್ರ ಬೆಳೆಯಿಂದ ರೈತರ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ – ವಸಂತ ರೆಡ್ಡಿ

  300x250 AD

  ಶಿರಸಿ: ರೈತರು ತಮ್ಮ ಹೊಲಗದ್ದೆಗಳಲ್ಲಿ ಮಿಶ್ರ ಬೆಳೆಯನ್ನು ಬೆಳೆಯುವ ಮೂಲಕ ಆರ್ಥಿಕ ಸ್ಥಿತಿ ಉತ್ತಮಗೊಳಿಸಬೇಕೆಂದು ಕೆನರಾ ವೃತ್ತ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಹೇಳಿದರು.

  ಅರಣ್ಯ ಮಹಾವಿದ್ಯಾಲಯದಲ್ಲಿ ನಡೆದ ಅರಣ್ಯ ಮೇಳವನ್ನು ಉದ್ಘಾಟಿಸಿ ಮಾತನಾಡುತ್ತ, ರೈತರು ತಮ್ಮ ಜಮೀನುಗಳಲ್ಲಿ ಏಕ ಬೆಳೆ ಬೆಳೆಯುವುದರ ಜೊತೆಗೆ ಮಿಶ್ರಬೆಳೆ ಬೆಳೆಯುವ ಪದ್ದತಿಯನ್ನು ರೂಡಿಸಿಕೊಳ್ಳಬೇಕು ಎಂದರು. ಮಿಶ್ರ ಬೆಳೆ ಬೆಳೆದ ಅನೇಕ ರೈತರು ಯಶಸ್ವಿಯಾಗಿದ್ದು, ಇವರ ಸಾಧನೆಯ ಪರಿಚಯ ಅರಣ್ಯ ಇಲಾಖೆಯಿಂದಾಬೇಕಾಗಿದೆ ಎಂದರು.

  ಇದೇ ಸಂಧರ್ಭದಲ್ಕಿ ಕೃಷಿಯಲ್ಲಿ ಸಾಧನೆ ತೋರಿದ ಶಿರಸಿ ಸಿದ್ದಾಪುರ ಹಾಗು ಮುಂಡಗೋಡ ತಾಲೂಕಿನ 20 ರೈತರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಣ್ಯ ಮಹಾವಿದ್ಯಾಲಯ ವಿದ್ಯಾಧಿಕಾರಿ ಡಾ.ಎ.ಜೆ.ಕೊಪ್ಪದ ವಹಿಸಿದ್ದರು.

  300x250 AD

  ಮುಖ್ಯ ಅತಿಥಿಗಳಾಗಿ ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ಎನ್.ಕೆ.ಹೆಗಡೆ, ತೋಟಗಾರಿಕಾ ಮಹಾವಿದ್ಯಾಲಯ ಹಿರಿಯರಾದ ಡಾ.ಕೆ.ಮಂಜಪ್ಪ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಎಸ್.ಎಮ್.ಹೊನ್ನಳ್ಳಿ, ಹಿರಿಯ ವಿಜ್ಞಾನಿ ರಾಜು ನೆಗಳೂರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಶೋಕ ಅಲಗೂರ್, ಹರೀಶ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅರಣ್ಯ ಉತ್ಪನ್ನಗಳ ಸ್ಟಾಲ್‍ಗಳನ್ನು ಉದ್ಘಾಟಿಸಿ ಪರಿಶೀಲನೆ ನಡೆಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top