ಶಿರಸಿ: ನಗರ ಪ್ರದೇಶದಲ್ಲಿ ಬಿಡಾಡಿ ದನಗಳಲ್ಲಿ ಕಂಡುಬರುತ್ತಿರುವ ಕಾಯೊಡೆ, ಬಾಯೊಡೆ ರೋಗಕ್ಕೆ ರಾಘವೆಂದ್ರಮಠದ ಸರ್ಕಲ್ ಬಳಿ ನಗರಸಭೆಯಿಂದ ನಿರ್ಮಿಸಿರುವ ಗೋದಾಮಿನಲ್ಲಿ ಚಿಕಿತ್ಸೆ ಆರಂಭವಾಗಿದೆ.
ನಗರ ಪ್ರದೇಶದಲ್ಲಿ ಬಿಡಾಡಿ ದನಗಳಲ್ಲಿ ಕಾಯೊಡೆ ಬಾಯೊಡೆ ರೋಗ ತೀವ್ರದಲ್ಲಿರುವುದು ಕಂಡು ಬಂದಿರುವುದರಿಂದ ನಗರಸಭೆ ಅವುಗಳಿಗೆ ಚಿಕಿತ್ಸೆ ನೀಡಲು ಮುಂದಾಗಿದೆ. ಚಿಕಿತ್ಸೆ ನೀಡಲು ಗೋ ರಕ್ಷಕ ಪಡೆಯ ರವಿ ಗೌಳಿ ತಂಡ ಸಿದ್ಧವಾಗಿದ್ದು, ಅವರಿಗೆ ಚಿಕಿತ್ಸೆಗೆ ಬೇಕಾಗುವ ಪರಿಕರಗಳನ್ನು ನೀಡಲು ನಗರಸಭೆ ಮುಂದಾಗಿದೆ.
ಲಸಿಕೆ ನೀಡಿದ ಬಳಿಕ ಒಂದು ವಾರದಲ್ಲಿ ದನಗಳನ್ನು ವಾರಸುದಾರರು ಒಯ್ಯತಕ್ಕದ್ದು. ಇಲ್ಲವಾದಲ್ಲಿ ಹರಾಜಿನ ಮೂಲಕ ಸಾಕುವವರಿಗೆ ನೀಡಲಾಗುವದೆಂದು ನಗರಸಭೆ ಎಚ್ಚರಿಕೆ ನೀಡಿದೆ.