ದಾಂಡೇಲಿ: ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಬರ್ಚಿ ರಸ್ತೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ವಾಹನಗಳ ಓಡಾಟವಿರುವುದರಿಂದ ಸಂಚಾರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಇದೇ ರಸ್ತೆಯಲ್ಲಿ ಕನ್ಯಾ ವಿದ್ಯಾಲಯ, ಜನತಾ ವಿದ್ಯಾಲಯವು ಇದ್ದು, ಇನ್ನೂ ಇದೇ ರಸ್ತೆಯ ಮೂಲಕ ಕಾಗದ ಕಾರ್ಖಾನೆ, ಬಂಗೂರನಗರ ಸರಕಾರಿ ಶಾಲೆ, ಸಾರ್ವಜನಿಕ ಆಸ್ಪತ್ರೆ, ಇ.ಎಸ್.ಐ ಆಸ್ಪತ್ರೆ, ಅಂಚೆ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿಗೆ ಹೋಗಬೇಕಾಗುತ್ತದೆ. ಮುಖ್ಯವಾಗಿ ನಾಲ್ಕು ರಸ್ತೆ ಕೂಡುವ ಬಾಂಬೂಗೇಟ್ ಹತ್ತಿರ ನಾಲ್ಕು ರಸ್ತೆಗಳಿಗೆ ಝಿಗ್ ಜಾಗ್ ಹಂಪ್ ಗಳನ್ನು ಆಳವಡಿಸುವುದು ಅನಿವಾರ್ಯವಾಗಿದೆ. ಇಲ್ಲಿ ಅಪಘಾತಗಳನ್ನು ತಪ್ಪಿಸುವ ದೃಷ್ಟಿಯಿಂದ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಜಿಗ್ ಜಾಗ್ ಹಂಪ್ ಗಳನ್ನು ಅಳವಡಿಸಬೇಕೆಂದು ಬಜರಂಗ ದಳದ ಜಿಲ್ಲಾ ಸುರಕ್ಷ ಪ್ರಮುಖರಾದ ಚಂದ್ರು ಮಾಳಿಯವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.