ಯಲ್ಲಾಪುರ; ತಾಲೂಕಿನ ಕಿರವತ್ತಿ ಗ್ರಾ.ಪಂ. ವ್ಯಾಪ್ತಿಯ ಗುಡಂದೂರು ಹಾಗೂ ಬೈಲಂದೂರು ಪರಿಶಿಷ್ಠ ಜಾತಿ ಬುಡಕಟ್ಟು ಜನಾಂಗದ ಮಜರೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕರಣ ಶುಕ್ರವಾರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,ಪ್ರಾಧಿಕಾರವು ಕಾನೂನು ಹಕ್ಕುಗಳ ಸಂರಕ್ಷಣೆಗೆ ಬದ್ದವಾಗಿದ್ದು,ವಿಲೇವಾರಿವಾಗದ ವ್ಯಾಜ್ಯಗಳ ಇತ್ಯರ್ಥಕ್ಕೆ ಲೋಕ ಅದಾಲತ್ ದಲ್ಲಿ ಅರ್ಜಿ ಸಲ್ಲಿಸಿ ಬಗೆಹರಿಸಿಕೊಳ್ಳಬಹುದು.ಜನಸಾಮಾನ್ಯರಿಗೆ ಕಾನೂನು ಅರಿವು ಉಂಟು ಮಾಡುವುದು ಪ್ರಾಧಿಕಾರದ ಉದ್ದೇಶವಾಗಿದೆ ಎಂದರು.
ಉಚಿತ ಕಾನೂನಿನ ನೆರವನ್ನು ಜನಸಾಮಾನ್ಯರು,ಮಹಿಳೆಯರು,ಪರಿಶಿಷ್ಢ ಜಾತಿ,ಪಂಗಡದವರು,ದೌರ್ಜನ್ಯಕ್ಕೆ ಒಳಗಾದವರು,ನೊಂದವರು ಕಾರ್ಮಿಕರು ಪಡೆದು ಕೊಳ್ಳ ಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಾಧೀಶ ಓಂಕಾರಮೂರ್ತಿ,ಜಿಲ್ಲಾ ಪ್ರಬಾರ ಯುವಜನ ಕ್ರೀಡಾಧಿಕಾರಿ ಮನೀಷ ನಾಯಕ,ಪ್ಯಾರಾ ಲೀಗಲ್ ವಾಲಂಟೀಯರ್ ಸುಧಾಕರ ನಾಯಕ,ಪ್ರಮುಖರಾದ ಪ್ರದೀಪ ನಾಯಕ ಕಾರವಾರ,ಪದ್ಮರಾಜ ನಾಯ್ಕ ಇದ್ದರು.