ಶಿರಸಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಎರಡು ಅಂಗಡಿಗಳಿಗೆ ಹಾನಿಯಾದ ಘಟನೆ ತಾಲೂಕಿನ ಬಿಸಲಕೊಪ್ಪಾದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಇಲ್ಲಿನ ರಾಘವೇಂದ್ರ ಕಲಬುರ್ಗಿಗೆ ಸೇರಿದ ಕಿರಾಣಿ ಅಂಗಡಿ ಹಾಗೂ ಶಂಕರ ಪೂಜಾರಿ ಮಾಲಿಕತ್ವದ ಮೊಬೈಲ್ ಅಂಗಡಿಗೆ ಹಾನಿಯಾಗಿದೆ.
ಮಧ್ಯಾಹ್ನ ಊಟದ ವೇಳೆಯಲ್ಲಿ ಅಂಗಡಿಗಳನ್ನು ಮುಚ್ಚಿದ್ದ ಸಮಯದಲ್ಲಿ ಘಟನೆ ಸಂಭವಿಸಿದ್ದು ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಪಟ್ಟರೂ ಸಹ ಅಷ್ಟರಲ್ಲಿಯೇ ಅಂಗಡಿಗಳಿಗೆ ಸಾಕಷ್ಟು ಬೆಂಕಿ ಆವರಿಸಿಕೊಂಡಿದೆ ಎಂದು ತಿಳಿದುಬಂದಿದೆ.