ಹೊನ್ನಾವರ: ತಾಲೂಕಿನ ಕಡ್ಲೆ ಗ್ರಾಮದ ಹೆಬ್ಬಾರ್ನಕೇರಿ ಶಾಲೆಯಲ್ಲಿ ಮೇ 14ರಂದು ಬೆಳಿಗ್ಗೆ 10ರಿಂದ 2 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಗ್ರಾ.ಪಂ. ಸದಸ್ಯ ಎಚ್.ಆರ್.ಗಣೇಶ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸನಗರದ ಶ್ರೀರಾಮಚಂದ್ರಪುರ ಮಠ, ಸೇವಾಖಂಡದ ಯೋಗಕ್ಷೇಮದ ವಿಭಾಗ, ಸಹಾಯ ವಿಭಾಗ ಹಾಗೂ ಹೊನ್ನಾವರ ಹವ್ಯಕ ಮಂಡಲ, ಕಡ್ಲೆ ಗ್ರಾ.ಪಂ., ಪ್ರಾಥಮಿಕ ಶಾಲೆ, ಯಕ್ಷಗಾನ ಪ್ರತಿಷ್ಠಾನ, ಭಾರತೀಯ ಕಿಸಾನ್ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಂಟಿ ಆಶ್ರಯದಲ್ಲಿ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ನುರಿತ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನುಆಯೋಜಿಸಲಾಗಿದೆ ಎಂದರು.
ಶಿಬಿರದಲ್ಲಿ ಶ್ವಾಸಕೋಶ ತಜ್ಞ ಡಾ. ಚಂದ್ರಮೌಳಿ ಎಂ.ಟಿ., ಮಕ್ಕಳ ತಜ್ನ ಡಾ.ಎ.ವರ್ಗಿಸ್, ವೈದ್ಯಕೀಯ ತಜ್ಞ ಡಾ.ಸೈಯದ್, ಎಲುಬು ಮತ್ತು ಕೀಲು ತಜ್ಞ ಡಾ.ನಿಹಲ್ ರೈ, ಶಸ್ತ್ರಚಿಕಿತ್ಸಾ ತಜ್ಞ ಡಾ.ರೋಹಿತ್ ಹೊಳ್ಳ ಮುಂತಾದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಶಿಬಿರದಲ್ಲಿ ವೈದ್ಯರು ಸೂಚಿಸಿದವರಿಗೆ ಇಸಿಜಿ, ಮಧುಮೇಹ, ಮತ್ತು ರಕ್ತದೊತ್ತಡ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈ ವೇಳೆ ಗ್ರಾ.ಪಂ. ಅಧ್ಯಕ್ಷ ಗೋವಿಂದ ಗೌಡ, ಬಿಜೆಪಿ ಮುಗ್ವಾ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ ಹೆಗಡೆ, ಶಕ್ತಿ ಕೇಂದ್ರದ ಅಧ್ಯಕ್ಷ ಮಹಾಬಲೇಶ್ವರ ಮಡಿವಾಳ ಇದ್ದರು.