• first
    second
    third
    Slide
    previous arrow
    next arrow
  • ಬಂಕನಾಳದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರಿ ಸಂಘದ ಉದ್ಘಾಟನೆ

    300x250 AD

    ಶಿರಸಿ: ತಾಲೂಕಿನ ಬಂಕನಾಳದಲ್ಲಿ ಬಂಕನಾಳ ಹಾಲು ಉತ್ಪಾದಕರ ಸಹಕಾರಿ ಸಂಘವನ್ನು ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಅವರು ಹಾಲು ಅಳೆಯುವುದರ ಮುಖಾಂತರ ಉದ್ಘಾಟಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಂಕನಾಳ ಗ್ರಾಮದಲ್ಲಿ ಈ ಮೊದಲು ರೈತರಿಂದ ಉತ್ಪಾದಿಸಲ್ಪಟ್ಟ ಹಾಲು ಖಾಸಗಿ ಹಾಲು ಮಾರಾಟ ಮಾಡುವವರಿಗೆ ಮತ್ತು ಕೃಷ್ಣ ಡೇರಿಗೆ ಕಳುಹಿಸಲ್ಪಡುತ್ತಿತ್ತು ಇದರಿಂದ ಈ ಭಾಗದ ರೈತರಿಗೆ ಸರಕಾರದಿಂದ ನೀಡುವ ನೀಡಲಾಗುವ ರೂ. 5/- ಪ್ರೋತ್ಸಾಹಧನ ಲಭಿಸುತ್ತಿರಲಿಲ್ಲ ಹಾಗೂ ಒಕ್ಕೂಟದದಿಂದ ನೀಡಲಾಗುವ ವಿಶೇಷ ಅನುದಾನ ಮತ್ತು ಸಹಾಯ ಸೌಲಭ್ಯಗಳು ಕೂಡ ಸಿಗುತ್ತಿರಲಿಲ್ಲ, ಇದನ್ನು ಮನಗಂಡ ನಾವು ಈ ಭಾಗದ ರೈತರನ್ನು ಸಹಕಾರಿ ವ್ಯವಸ್ಥೆಗೆ ತರಬೇಕು ಎಂಬ ಉದ್ದೇಶದಿಂದ ಹಾಲು ಉತ್ಪಾದಕ ರೈತರ ಜೊತೆ ಸಭೆ ನಡೆಸಿ ಸರಕಾರ ಹಾಗೂ ಒಕ್ಕೂಟದ ಸೌಲಭ್ಯಗಳ ಕುರಿತಾಗಿ ಮಾಹಿತಿ ನೀಡಿ ರೈತರ ಮನವೊಲಿಸಿ ಬಂಕನಾಳದಲ್ಲಿ ಒಂದು ಹಾಲು ಉತ್ಪಾದಕರ ಸಹಕಾರಿ ಸಂಘವನ್ನು ಪ್ರಾರಂಭಿಸಲಾಯಿತು ಎಂದರು.

    ಹಾಲು ಉತ್ಪಾದಕ ರೈತರು ಹೆಚ್ಚು ಹಾಲು ಉತ್ಪಾದನೆಯ ಜೊತೆಯಲ್ಲಿ ಮುಖ್ಯವಾಗಿ ಉತ್ತಮ ಗುಣಮಟ್ಟದ ಹಾಲನ್ನು ಉತ್ಪಾದಿಸುವಲ್ಲಿ ಹೆಚ್ಚಿನ ಗಮನ ನೀಡಬೇಕು, ಜಿಲ್ಲೆಯ ಸಹಕಾರಿ ವ್ಯವಸ್ಥೆಯ ಅಡಿಯಲ್ಲಿ ಹಾಲು ಉತ್ಪಾದನಾ ಕ್ಷೇತ್ರ ಬೆಳೆಯುತ್ತಿರುವುದರಿಂದ ತಾವೆಲ್ಲರೂ ಇದರ ಜೊತೆ ಕೈ ಜೋಡಿಸಿ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸಮಗ್ರ ಅಭಿವೃದ್ಧಿಗೆ ಕಾರಣೀಕರ್ತರಾಗಬೇಕು ಎಂದರು.

    300x250 AD

    ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲೂ ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ಸ್ಥಾಪಿಸುವ ಗುರಿಯೊಂದಿಗೆ ನಾವು ಹೊರಟಿದ್ದೇವೆ ಅದಕ್ಕಾಗಿ ತಾವುಗಳು ಮನೆಗೊಂದು ಹಸು ಕಟ್ಟಿ ಹಾಲು ಉತ್ಪಾದನಾ ಕ್ಷೇತ್ರವನ್ನು ಇನ್ನಷ್ಟು ಬಲ ಪಡಿಸಬೇಕೆಂದು ವಿನಂತಿಸಿಕೊಂಡರು. ನಮ್ಮ ಜಿಲ್ಲೆಯ ಹಾಲನ್ನು ಇಲ್ಲೆಯೇ ಪ್ಯಾಕ್‌ ಮಾಡಿ ಗ್ರಾಹಕರಲ್ಲಿಗೆ ತಲುಪಿಸುವ ವ್ಯವಸ್ಥೆ ಜಾರಿಗೆ ಬಂದಿರುವುದರಿಂದ ನಾಳಿನ ದಿನಗಳಲ್ಲಿ ಹಾಲಿಗೆ ಉತ್ತಮ ಬೇಡಿಕೆ ಬರುವ ಸಾಧ್ಯತೆಗಳಿದ್ದು, ಹಾಲಿಗೆ ಉತ್ತಮ ದರ ಸಿಗುವ ನಿರೀಕ್ಷೆಯಿದೆ ಎಂದರು. ತಾವುಗಳು ಹೈನುಗಾರಿಕೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೈನುಗಾರಿಕೆಯನ್ನು ಉಪ ಕಸುಬಾಗಿಸದೇ ಅದನ್ನು ಮುಖ್ಯ ಕಸುಬಾಗಿ ಪರಿಗಣಿಸಿಕೊಂಡು ಉತ್ತಮ ಗುಣಮಟ್ಟದ ಅತೀ ಹೆಚ್ಚು ಹಾಲು ಉತ್ಪಾದನೆ ಮಾಡುವಂತೆ ಹಾಗೂ ಸಂಘಕ್ಕೆ ಸಿಗಬಹುದಾದ ಎಲ್ಲಾ ಸೌಕರ್ಯಗಳನ್ನು ಕೊಡಿಸಲು ನಾನು ಸದಾ ನಿಮ್ಮೊಂದಿಗೆ ಇರುತ್ತೇನೆಂದು ತಿಳಿಸಿ, ಶುಭಕೋರಿದರು.

    ಈ ಕಾರ್ಯಕ್ರಮದಲ್ಲಿ ಬಂಕನಾಳ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಕಮಲಾಕರ ಬಾಬು ನಾಯ್ಕ, ಸಂಘದ ಆಡಳಿತ ಮಂಡಳಿಯ ಸದಸ್ಯರುಗಳು,ಹಾಲು ಉತ್ಪಾದಕ ರೈತರು, ಒಕ್ಕೂಟದ ಪಶು ವೈದ್ಯಾಧಿಕಾರಿಗಳಾದ ಡಾ. ವಿವೇಕ್‌ ಎಸ್‌ ಆರ್‌, ವಿಸ್ತರಣಾಧಿಕಾರಿ ಮೌನೇಶ, ವಿಸ್ತರಣಾಸಮಾಲೋಚಕರುಗಳಾದ ದಯನಾಂದ ಎಂ ಬೋರ್ಕರ್‌, ಅಭಿಷೇಕ ನಾಯ್ಕ ಉಪಸ್ಥಿತರಿದ್ದರು. ಹನುಮಂತ ಎಸ್‌ ನಾಯ್ಕ ಸ್ವಾಗತಿಸಿದರೆ, ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಗಣೇಶ ಮಾರ್ಯಪ್ಪ ನಾಯ್ಕ ವಂದಿಸಿದರು.

    Share This
    300x250 AD
    300x250 AD
    300x250 AD
    Back to top