ಕುಮಟಾ: ಹಾಲಕ್ಕಿ ಒಕ್ಕಲಿಗರ ಸಂಘದ ನಿರ್ದೇಶಕರು, ಕುಮಟಾ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡರಾದ ಮಂಜುನಾಥ ಗೌಡ ಕುಡ್ಲೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಹಾಲಕ್ಕಿ ಸಮಾಜದವರಲ್ಲಿ ರಾಜಕೀಯವಾಗಿ ಗುರುತಿಸಿಕೊಂಡ ಪ್ರಮುಖರಲ್ಲಿ ಮಂಜುನಾಥ ಗೌಡ ಓರ್ವರಾಗಿದ್ದರು.ಸಮಾಜದ ಕಾರ್ಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ, ಸಮಾಜಮುಖಿ ಚಿಂತಕರಾಗಿದ್ದಇವರ ನಿಧನವು ಹಾಲಕ್ಕಿ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹಾಲಕ್ಕಿ ಸಮಾಜ ಹಾಗೂ ಗ್ರಾಮ ಒಕ್ಕಲು ಯುವ ಬಳಗವು ಸಂತಾಪ ಸೂಚಿಸಿದೆ.
ಇವರ ಪತ್ನಿ ಮಾದೇವಿ ಗೌಡ ಅವರೂ ಕೂಡ ಈ ಹಿಂದೆ ಜಿಲ್ಲಾ ಪಂಚಾಯತ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ, ಮಕ್ಕಳು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ, ಯುವ ಮುಖಂಡ ರವಿಕುಮಾರ ಮೋಹನ ಶೆಟ್ಟಿ, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್. ನಾಯ್ಕ ಅವರು ಸಂತಾಪ ಸೂಚಿಸಿದ್ದಾರೆ