ಜೋಯಿಡಾ: ಏಷೀಯಾ ವೇದಿಕ್ ಕಲ್ಬರಲ್ ರಿಸರ್ಚ್ ಸಂಸ್ಥೆ ವತಿಯಿಂದ ತಾಲೂಕಿನ ಗುಂದದ ಶ್ರೀಕೃಷ್ಣ ಹೆಗಡೆಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಲಾಗಿದೆ.
ಸದ್ಯ ಬೆಂಗಳೂರಿನಲ್ಲಿ ತಮ್ಮದೇ ಕಲ್ಪತರು ಫೌಂಡೇಶನ್ ಮೂಲಕ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಕೃಷ್ಣ ಹೆಗಡೆಗೆ, ಜ್ಯೋತಿಷ್ಯ, ವೇದ, ಆಗಮ ವಿಷಯದಲ್ಲಿ ಮಾಡಿರುವ ಸಾಧನೆಯನ್ನು ಗಮನಿಸಿ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಲಾಗಿದೆ.
ಅನಂತ ಹೆಗಡೆ ಮತ್ತು ಶ್ರೀಮತಿ ಸುಶೀಲಾ ಹೆಗಡೆ ಇವರ ಮಗನಾಗಿರುವ ಶ್ರೀ ಕೃಷ್ಣ ಹೆಗಡೆ ಇವರ ಈ ಸಾಧನೆಯಗೆ ತಂದೆ ತಾಯಿ ಹಾಗೂ ಊರನಾಗರಿಕರು ಅಭಿನಂದಿಸಿದ್ದಾರೆ.