ಶಿರಸಿ; ಪಾರಂಪರಿಕ ಕೃಷಿಯನ್ನು ಉಳಿಸಬೇಕು, ಬೆಳೆಸಬೇಕು , ಸಮಾಜದಲ್ಲಿ ಕೃಷಿಯ ಅವನತಿಯನ್ನು ತಡೆಯಬೇಕು ಎಂಬ ನಿಟ್ಟಿನಲ್ಲಿ ಪರಮಪೂಜ್ಯ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ಆಶಯದಂತೆ ಅನೇಕ ಕೃಷಿ ಪರ ಕಾರ್ಯಕ್ರಮಗಳನ್ನು 2008 ರಿಂದ ಪ್ರತಿವರ್ಷವೂ ಆಯೋಜಿಸಲಾಗುತ್ತಿದೆ. ಯುವ ಜನಾಂಗವು ಕೃಷಿಯತ್ತ ಬರಲು, ಅವರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಾಧ್ಯಮಿಕ ಶಾಲಾ ಮಕ್ಕಳಿಗಾಗಿ ಕೃಷಿ ರಸಪ್ರಶ್ನೆಕಾರ್ಯಕ್ರಮವನ್ನು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನವು ಕೃಷಿ ಪ್ರತಿಷ್ಠಾನದ ಮೂಲಕ ಪ್ರತಿವರ್ಷವೂ ನಡೆಸುತ್ತಿದೆ.
ಅಂತೆಯೇ 2022ರ ಕೃಷಿ ರಸಪ್ರಶ್ನೆ ಕಾರ್ಯಕ್ರಮವು ರಾಜ್ಯದಾದ್ಯಂತ ಮೇ 8 ರಂದು ಮುಂಜಾನೆ 9 ಘಂಟೆಯಿಂದ ಸಂಜೆ 6 ಘಂಟೆಯ ವರೆಗೆ ಅಂತರ್ಜಾಲದ ಮುಖಾಂತರ ನಡೆದಿದ್ದು ಸ್ಪರ್ಧೆಯಲ್ಲಿ 749 ಮಕ್ಕಳು ಪಾಲ್ಗೊಂಡಿದ್ದರು ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಅಂಕ ಗಳಿಸಿದ ಮಕ್ಕಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಥಮ ಸ್ಥಾನವನ್ನು ಹುಲೇಕಲ್ ನ ಶ್ರೀದೇವಿ ಶಿಕ್ಷಣ ಸಂಸ್ಥೆಯ ಕುಮಾರಿ ಅನೂಷಾ ಹಾಗೂ ಯಲ್ಲಾಪುರದ ವಿಶ್ವದರ್ಶನ ಶಾಲೆಯ ಕುಮಾರಿ,ಸಿಂಚನಾ ಭಟ್ ಹಂಚಿಕೊಂಡಿದ್ದಾರೆ.
ಹಾಗೆಯೇ ದ್ವಿತೀಯ ಸ್ಥಾನವನ್ನು ಶಿರಸಿಯ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಕು,ಅಯಾನಾ,ವಾಯ್, ಹಾಗೂ ಕೆ.ಪಿ.ಎಸ್.ಬೀಳೂರಿನ ಬಿಂದು ಎಚ್ ನಾಯ್ಕ ಪಡೆದುಕೊಂಡಿದ್ದಾರೆ.
ಮೇ 14 ರಂದು ಕೃಷಿ ಜಯಂತಿ ಸಮಾರೋಪ ಸಮಾರಂಭದಲ್ಲಿ ಪರಮಪೂಜ್ಯ ಶ್ರೀ ಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.