ಶಿರಸಿ: ಆರ್ಯಭಟ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ನೀಡುವ 2020-22 ನೇ ಸಾಲಿನ ಆರ್ಯಭಟ ಅಂತರರಾಷ್ಟೀಯ ಪ್ರಶಸ್ತಿಗೆ ಭೈರುಂಬೆಯ ಕಿರಣ ಭಟ್ ಭಾಜನರಾಗಿದ್ದಾರೆ.
ಗ್ರಾಮೀಣ ಭಾಗದಲ್ಲಿನ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ಕಿರಣ್ ಭಟ್ ಗೆ ನೀಡಲಾಗುತ್ತಿದೆ. ಇವರು ವೃತ್ತಿಯಲ್ಲಿ ವಿದ್ಯುತ್ ಗುತ್ತಿಗೆದಾರರಾಗಿದ್ದು ಭೈರುಂಬೆ ಪಂಚಾಯತದ ಹಾಲಿ ಸದಸ್ಯರಾಗಿರುತ್ತಾರೆ.ಇವರು ಭೈರುಂಬೆಯ ರವೀಂದ್ರ ಭಟ್ ಹಾಗೂ ಉಷಾ ಭಟ್ ದಂಪತಿಗಳ ಪುತ್ರ.
ಪ್ರಶಸ್ತಿಯನ್ನು ಮೇ 25,ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರಧಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಡಾ. ಎಚ್.ಎಲ್.ಎನ್. ರಾವ್ ತಿಳಿಸಿದ್ದು, ಪ್ರಶಸ್ತಿಯನ್ನು ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳಾದ ಅರಳಿ ನಾಗರಾಜ ಮತ್ತು ಮಹೇಶ ಜೋಶಿ, ಪ್ರದಾನ ಮಾಡಲಿದ್ದಾರೆ