ಸಿದ್ದಾಪುರ : ತಾಲೂಕಿನ ಕ್ಯಾದಗಿ ಪಂ. ಬಿಳಗಿ-ನೀರಗಾಲ-ಕುಂಬಾರಕುಳಿ-ಚಪ್ಪರಮನೆ ರಸ್ತೆಯಲ್ಲಿರುವ ಸೇತುವೆ ನಿರ್ಮಾಣ ಕಾಮಗಾರಿ, ವಂದಾನೆಯಲ್ಲಿ ನೂತನವಾಗಿ ಪ್ರಾರಂಭಿಸಿರುವ ಗ್ರಾಮೀಣ ಕೃಷಿ ಯಂತ್ರೋಪಕರಣಗಳ ಕೇಂದ್ರ, ದೊಡ್ಮನೆ ಪಂ. ಹಸ್ವಿಗುಳಿ ಅಂಗನವಾಡಿಯ ನೂತನ ಕಟ್ಟಡವನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು.
ಕೌಂಶಲೆ ರಸ್ತೆ ಕಾಮಗಾರಿ ಹಾಗೂ ದೊಡ್ಮನೆ ಮುಖ್ಯ ರಸ್ತೆಯ ಪಂಚಾಯತ ಎದರುಗಡೆ ಕಾಂಕ್ರೀಟ್ ಚರಂಡಿ ಹಾಗೂ ಪ್ಲೆವರ್ಸ್ ಅಳವಡಿಕೆ ಕಾಮಗಾರಿ ಸೇರಿದಂತೆ ಒಟ್ಟು 1.46 ಕೋಟಿ ರೂಪಾಯಿಗಳ ಕಾಮಗಾರಿಗೆ ಚಾಲನೆ ನೀಡಿದರು. ನಂತರ ಸಾವಲಗದ್ದೆ ಶ್ರೀ ಕಲ್ಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವರ ಆಶೀರ್ವಾದ ಪಡೆದರು.