ದಾಂಡೇಲಿ: ಕಟ್ಟಡದ ಮೇಲಿದ್ದ ಗಾಳಿಪಟವನ್ನು ತೆಗೆಯಲು ಹೋಗಿದ್ದ ಬಾಲಕನಿಗೆ ವಿದ್ಯುತ್ ತಗುಲಿ ಗಂಭೀರ ಗಾಯಗೊಂಡ ಘಟನೆ ನಗರದ ಬಾಂಬೆಚಾಳದಲ್ಲಿ ನಡೆದಿದೆ.
ನಗರದ ಬಾಂಬೆಚಾಳದ ನಿವಾಸಿ ಅಶೋಕ ಬಂಡಿವಡ್ಡರ ಅವರ 15 ವರ್ಷದ ಪುತ್ರ ಗಾಯಗೊಂಡವನು. ತನ್ನ ಮನೆ ಸಮೀಪದ ಕಟ್ಟಡದ ಮೇಲಿದ್ದ ಗಾಳಿಪಟವನ್ನು ತೆಗೆಯಲು ಹೋಗಿದ್ದ ಸಂದರ್ಭದಲ್ಲಿ ವಿದ್ಯುತ್ ತಂತಿ ತಗುಲಿ ವಿದ್ಯುತ್ ಶಾಕ್ ಸಂಭವಿಸಿದೆ ಎನ್ನಲಾಗಿದೆ.
ಘಟನೆಯಿಂದ ಬಾಲಕನ ಬಲಗೈ ಸಂಪೂರ್ಣ ಸುಟ್ಟು ಹೋಗಿದೆ. ಘಟನೆ ನಡೆದ ತಕ್ಷಣವೆ ಬಾಲಕನನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಆನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.