• first
    second
    third
    previous arrow
    next arrow
  • ‘ಚಿನ್ನದ ಹುಡುಗಿ’ ನಿವೇದಿತಾಗೆ ರಾಜ್ಯ ಅಥ್ಲೆಟಿಕ್ಸ್ ನಲ್ಲಿ ಒಂದು ಬೆಳ್ಳಿ, ಕಂಚು

    300x250 AD

    ಕಾರವಾರ:ಮೇ 8 ಮತ್ತು 9ರಂದು ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಷನ್ ಮತ್ತು ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಮುಕ್ತ ಪುರುಷರ ಮತ್ತು ಮಹಿಳೆಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕಾರವಾರದ ಚಿನ್ನದ ಹುಡುಗಿ ನಿವೇದಿತಾ ಸಾವಂತ ಭಾಗವಹಿಸಿ ಹ್ಯಾಮರ್ ಥ್ರೋನಲ್ಲಿ ಬೆಳ್ಳಿ ಮತ್ತು ಡಿಸ್ಕಸ್ ಥ್ರೋ ನಲ್ಲಿ ಕಂಚಿನ ಪದಕ ಪಡೆದಿದ್ದಾಳೆ.

    ಮಹಿಳೆಯರ ಹ್ಯಾಮರ್ ಥ್ರೋ ವಿಭಾಗದಲ್ಲಿ 40.08 ಮೀಟರ್ ಥ್ರೋ ಮಾಡುವ ಮೂಲಕ ಬೆಳ್ಳಿ ಪದಕವನ್ನು, ಡಿಸ್ಕಸ್ ಥ್ರೋ ವಿಭಾಗದಲ್ಲಿ41.90 ಮೀಟರ್ ದೂರ ಎಸೆಯುವ ಮೂಲಕ ಕಂಚಿನ ಪದಕವನ್ನು ಪಡೆದಿದ್ದಾರೆ.

    ನಿವೇದಿತಾ ಕಳೆದ 10 ವರ್ಷಗಳಿಂದ ಕಾರವಾರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ತರಬೇತುದಾರರಾದ ಪ್ರಕಾಶ ರೇವಣಕರ ಅವರ ಬಳಿ ಕಾರವಾರದ ಮಾಲಾದೇವಿ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ನಲ್ಲಿ ತರಬೇತಿ ಪಡೆಯುತ್ತಿದ್ದು, ರಾಷ್ಟ್ರ ಮಟ್ಟದಲ್ಲಿ ಡಿಸ್ಕಸ್ ಥ್ರೋ ವಿಭಾಗ ಮತ್ತು ಶಾಟ್ ಪುಟ್ ಥ್ರೋ ವಿಭಾಗದಲ್ಲಿ 19 ಪದಕಗಳನ್ನು ಪಡೆದಿದ್ದಾರೆ. ಕ್ರೀಡಾ ಕೋಟಾದ ಅಡಿಯಲ್ಲಿ ತುಮಕೂರಿನ ಸಿದ್ದಗಂಗಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ವಿಭಾಗದಲ್ಲಿ ಪದವಿಯನ್ನು ಪಡೆದಿರುವ ನಿವೇದಿತಾ, ಪ್ರಸ್ತುತ ಟಿಸಿಎಸ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    300x250 AD

    ನಿವೇದಿತಾರವರ ಈ ಕ್ರೀಡಾ ಸಾಧನೆಗೆ ಉತ್ತರ ಕನ್ನಡ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್‍ನ ಅಧ್ಯಕ್ಷ ಸದಾನಂದ ನಾಯ್ಕ, ಕಾರ್ಯದರ್ಶಿ ಕೆ.ಆರ್.ನಾಯಕ ಹಾಗೂ ಜಿಲ್ಲೆಯ ಅಪಾರ ಕ್ರೀಡಾಪ್ರೇಮಿಗಳು ಅಭಿನಂದನೆ ಸಲ್ಲಿಸಿದ್ದಾರೆ.

    Share This
    300x250 AD
    300x250 AD
    300x250 AD
    Back to top