ಅಂಕೋಲಾ: ಶ್ರೀನಾರಾಯಣ ಗುರು ವೇದಿಕೆ ವತಿಯಿಂದ ನಾಮಧಾರಿ ಸಮಾಜದವರಿಗಾಗಿ ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಮೇ 14ರಂದು ಪಟ್ಟಣದ ಪಿ.ಎಂ ಹೈಸ್ಕೂಲಿನ ರೈತಭವನದ ಸಭಾಭವನದಲ್ಲಿ ಆಯೋಜಿಸಲಾಗಿದೆ.
ವೈದ್ಯ ಡಾ.ಕರುಣಾಕರ ಎಂ.ನಾಯ್ಕ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ವಿಜಯಕುಮಾರ ನಾಯಕ ಅಧ್ಯಕ್ಷತೆ ವಹಿಸಲಿದ್ದಾರೆ. ನಾಮಧಾರಿ ಸಮಾಜದ ಮುಖಂಡ ಎಂ.ಪಿ.ನಾಯ್ಕ, ಉಪತಹಶೀಲ್ದಾರ ಶ್ರೀಧರ ಎ.ನಾಯ್ಕ, ನಾಮಧಾರಿ ಸಮಾಜದ ಮುಖಂಡ ನಾಗೇಶ ನಾಯ್ಕ ಆಚಾ, ನಿವೃತ್ತ ಕಾರ್ಯಾಲಯ ಸಹಾಯಕ ಡಿ.ಜಿ.ನಾಯ್ಕ, ಅರಣ್ಯ ಇಲಾಖೆ ನೌಕರ ವಿನಾಯಕ ಆರ್.ನಾಯ್ಕ ಪಾಲ್ಗೊಳ್ಳಲಿದ್ದಾರೆ.
ಪ್ರತಿಭಾ ಪುರಸ್ಕಾರ: ಎಸ್‍ಎಸ್‍ಎಲ್‍ಸಿಯಲ್ಲಿ ರಕ್ಷಿತಾ ನಾಯ್ಕ ಅಂಬಾರಕೊಡ್ಲ, ದೇವರಾಜ ನಾಯ್ಕ, ಪ್ರಣಮ ನಾಯ್ಕ ಕಾಕರಮಠ, ಪಿಯುಸಿಯಲ್ಲಿ ಅನನ್ಯಾ ನಾಯ್ಕ ಅಂಕೋಲಾ, ಸಂಪತ್ ನಾಯ್ಕ ಮಂಜಗುಣಿ, ನಿಖಿಲ ನಾಯ್ಕ ಅಂಬಾರಕೊಡ್ಲ, ಪದವಿಯಲ್ಲಿ ಸ್ನೇಹಲ್ ನಾಯ್ಕ ಕಲಭಾಗ, ಶರತ ಎ.ನಾಯ್ಕ ಅಂಬಾರಕೊಡ್ಲ, ರೇಷ್ಮಾ ನಾಯ್ಕ ವಂದಿಗೆ, ಸೂರಜ ನಾಯ್ಕ ಅಂಬಾರಕೊಡ್ಲ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ವೇದಿಕೆಯ ಅಧ್ಯಕ್ಷ ನಾಗರಾಜ ಮಂಜಗುಣಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ ತಿಳಿಸಿದ್ದಾರೆ.