ಯಲ್ಲಾಪುರ: ತಾಲೂಕಿನ ಉಮ್ಮಚ್ಗಿ ಪಂಚಾಯತ ವ್ಯಾಪ್ತಿಗೆ ಬರುವ ಬಾಳೆಗದ್ದೆ ಅಂಗನವಾಡಿ ಕೇಂದ್ರ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಅತೀಯಾದ ಮಳೆಸುರಿದಾಗ ಮಕ್ಕಳ ಮೇಲೆ ಬಿದ್ದರೆ ಎಂಬ ಆತಂಕ ಪಾಲಕರಲ್ಲಿ ಸೃಷ್ಟಿಯಾಗಿದೆ.
2007-8ನೇ ಸಾಲಿನ 12ನೇ ಹಣಕಾಸು ಯೋಜನೆಯ ಅಡಿಯಲ್ಲಿ ಮಂಜೂರಾಗಿರುವ ಹಣದಿಂದ ನಿರ್ಮಿಸಲಾದ ಈ ಕೇಂದ್ರದಲ್ಲಿ ಈಗ ಹದಿನಾಲ್ಕಕ್ಕೂ ಹೆಚ್ಚು ಮಕ್ಕಳು ಹಾಜರಿರುತ್ತಾರೆ. ಹಂಚು, ಸಿಮೆಂಟ್ ಶೀಟ್‍ಗಳನ್ನು ಹೊತ್ತಿರುವ ಫಕಾಸಿ, ರೀಪುಗಳು ಈಗಾಗಲೆ ದುರ್ಬಲಾವಸ್ಥೆಗೆ ತಲುಪಿವೆ. ಅಂಗನವಾಡಿ ಕೇಂದ್ರದ ನೆಲ ಕಿತ್ತು ಹಾಳಾಗಿದೆ. ಶಾಸಕರು, ಕಾರ್ಮಿಕ ಮಂತ್ರಿಗಳೂ ಆದ, ಎಸ್.ಎಂ.ಹೆಬ್ಬಾರ್ ಅವರ ಗಮನಕ್ಕೆ ಇದನ್ನು ತರಲಾಗಿದ್ದು, ಹೊಸ ಅಂಗನವಾಡಿ ಕಟ್ಟಡಕ್ಕಾಗಿ ಪ್ರಯತ್ನ ನಡೆಸಲಾಗುತ್ತಿದೆ.
ಬಾಳೆಗದ್ದೆ ಊರಿನಲ್ಲಿ ಬೇರೆ ಯಾವುದೇ ಸರಕಾರಿ ಕಟ್ಟಡ ಇಲ್ಲದ ಕಾರಣ ಅಂಗನವಾಡಿ ಕಟ್ಟಡ ಜರೂರಾರಾಗಿ ಮಂಜೂರಾಗ ಬೇಕಿದೆ ಎಂದು ಉಮ್ಮಚ್ಗಿ ಗ್ರಾ.ಪಂ. ಸ್ಥಳೀಯ ಸದಸ್ಯ ಗ.ರಾ.ಭಟ್ಟ ಆಗ್ರಹಿಸಿದ್ದಾರೆ.