ಶಿರಸಿ: ತಾಲೂಕಿನ ಅಂಡಗಿ ಗುರುಮಠದಲ್ಲಿ ಮೇ 14ರಿಂದ ಮೂರು ದಿನಗಳ ಕಾಲ ಕಲ್ಲೇಶ್ವರ ಸ್ವಾಮಿಗಳ ಶಿಲಾಮೂರ್ತಿ ಪ್ರತಿಷ್ಠಾಪನೆ, ಅಷ್ಠಬಂಧ ಮಹಾದ್ವಾರ ಅನಾವರಣ, ಕಳಸಾರೋಹಣ, ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಜರುಗಲಿದೆ.
14ರಂದು ಸಂಜೆ 4ರಿಂದ ವೇದಘೋಷದ ಮೂಲಕ ಪೂರ್ಣಕುಂಭ ಸಹಿತ ಸದ್ಗುರು ಅವಧೂತ ಕಲ್ಲೇಶ್ವರ ಮಹಾಸ್ವಾಮಿಗಳ ಶಿಲಾಮೂರ್ತಿ ಹಾಗೂ ಕಳಸದೊಂದಿಗೆ ಮಹಾದ್ವಾರದಿಂದ ಶ್ರೀಗುರುಮಠದವರೆಗೆ ಬೃಹತ್ ಮೆರವಣಿಗೆಯಲ್ಲಿ ತರಲಾಗುತ್ತದೆ. ನಂತರ ಋತ್ವಿಕಾರಣ, ದ್ವಾರಬಾಗಿಲ ಪೂಜೆ, ಯಾಗಶಾಲಾ ಪ್ರವೇಶ, ದೀಪಾರೋಹಣ, ಗುರುಪ್ರಾರ್ಥನೆ, ಗಣಪತಿ ಪೂಜೆ, ಮಹಾಸಂಕಲ್ಪ, ವಾಸುದೇವ ಶುದ್ಧಿ ಪುಣ್ಯಾಹ, ಅಂಕುರಾರ್ಪಣ, ರಕ್ಷಾಬಂಧನ, ಅಗ್ನಿಪ್ರತಿಷ್ಠೆ, ಮಹಾಗಣಪತಿ ಹವನ, ವಾಸ್ತು ಹೋಮ, ಪಂಚಗವ್ಯ ಹವನ, ಅಷ್ಠದಿಕ್ಪಾಲಕರ ಹೋಮ, ಪರಿವಾರ ದೇವತಾ ಹೋಮ, ಮಾನುಉನ್ಮಾನಿತ ದೋಷ ಪ್ರಾಯಶ್ಚಿತ ಹೋಮ, ಪೂರ್ಣಾಹುತಿ, ಕೂಷ್ಮಾಂಡಬಲಿಹರಣ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
15ರಂದು ಬೆಳಿಗ್ಗೆ 5ರಿಂದ ಸುಪ್ರಭಾತ, ಗಣಹವನ, ಕಳಸ ಪ್ರತಿಷ್ಠೆ, ನಯನೋನ್ಮಿಲನ, ಸಪ್ತದಶ ಕಳಶ ಸ್ಥಾಪನೆ, ಶತರುದ್ರ ಪಾರಾಯಣ, ಆದಿವಾಸಗಳು, ದೇವಿ ಪಾರಾಯಣ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಮಧ್ಯಾಹ್ನ 1ಕ್ಕೆ ‘ಅವಧೂತ ಯಾತ್ರೆ’- ಸದ್ಗುರು ಅವಧೂತ ಕಲ್ಲೇಶ್ವರ ಮಹಾಸ್ವಾಮಿಯವರ ಜೀವನಾಧಾರಿತ ಭಾವಚಿತ್ರ ಪ್ರದರ್ಶನದ ಉದ್ಘಾಟನೆ, ಮಹಾಪ್ರಸಾದ, ಸಂಜೆ 5ರಿಂದ ಪ್ರಬಂಧ ಸೇವೆ, ದ್ವಾರತೋರಣ, ಧ್ವಜ ಸ್ತಂಭ ದೇವತಾ ಪೂಜೆ, ಚಕ್ರಮಂಡಲ ಪೂಜೆ, ತತ್ವನ್ಯಾಸ ಹೋಮ, ಪ್ರಾಯಶ್ಚಿತ ಹೋಮ, ಪೂರ್ಣಾಹುತಿ, ಧಾನ್ಯಾದಿವಾಸ, ಪುಷ್ಪದಿವಾಸ, ರತ್ನಾದಿವಾಸ, ಜಲಾದಿವಾಸ, ಶಯ್ಯಾದಿವಾಸ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ಮಧ್ಯಾಹ್ನ 2.30ರಿಂದ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಶ್ರೀಗುರುಮಠದ ಅಧ್ಯಕ್ಷ ಭೀಮಣ್ಣ ಟಿ.ನಾಯ್ಕ, ಉಪಾಧ್ಯಕ್ಷ ಸಿ.ಎಫ್.ನಾಯ್ಕ, ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ, ಇಂಧನ ಸಚಿವ ವಿ.ಸುನೀಲಕುಮಾರ, ಸಂಸದ ಅನಂತಕುಮಾರ ಹೆಗಡೆ, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಕುಮಾರ ಬಂಗಾರಪ್ಪ, ಎನ್‍ಡಬ್ಲ್ಯುಕೆಆರ್‍ಟಿಸಿ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ, ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಮಧು ಬಂಗಾರಪ್ಪ, ಬಂದರು ನಿಗಮ ಮಂಡಳಿಯ ಮಾಜಿ ಅಧ್ಯಕ್ಷ ನಿವೇದಿತ್ ಆಳಾ, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಜೆ.ಜಗದೀಶ್, ಭಟ್ಕಳ ಶಾಸಕ ಸುನೀಲ್ ಬಿ.ನಾಯ್ಕ, ಸಾಗರ ಶಾಸಕ ಹರತಾಳ ಹಾಲಪ್ಪ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರ ಭೈರಿದೇವರಕೊಪ್ಪ, ಉಪವಿಭಾಗಾಧಿಕಾರಿ ದೇವರಾಜ ಆರ್., ಡಿವೈಎಸ್‍ಪಿ ರವಿ ನಾಯ್ಕ, ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ಆರ್.ಜಿ.ನಾಯ್ಕ, ಸಿದ್ದಾಪುರ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಲೋಕೇಶ ವೈ.ಆರ್. ಪಾಲ್ಗೊಳ್ಳಲಿದ್ದಾರೆ.
16ರಂದು ಬೆಳಿಗ್ಗೆ ಬೆಳಿಗ್ಗೆ 4ರಿಂದ ಸುಪ್ರಭಾತ, ಪಿಂಪಿಕಾ ಪೂಜೆ, ವಿಗ್ರಹ ಪ್ರತಿಷ್ಟಾಪನೆ, ಅಷ್ಟಬಂಧನ, ಶ್ರೀಕಲ್ಲೇಶ್ವರ ಗಾಯತ್ರಿ ಹೋಮ, ಅಷ್ಟದಿಕ್ಪಾಲಕರ ಹೋಮ, ಪ್ರಾಣ ಪ್ರತಿಷ್ಟಾಪನೆ,ಹೋಮ, ನವಗ್ರಹ ಹೋಮ, ಪರಿವಾರ ದೇವತಾ ಹೋಮ, ಪ್ರಾಯಶ್ಚಿತ್ತ ಹೋಮ, ಮಹಾಸಂಕಲ್ಪ, ಮಹಾಪೂರ್ಣಾಹುತಿ, ಕೂಷ್ಮಂಡ ಬಲಿಹರಣಪೂಜೆ, ಅಷ್ಟಮಂಗಳ ಪೂರ್ವಕ ಬಿಂಬದರ್ಶನ, ಗೋಕನ್ಯಾದರ್ಶನ, ಗೋಪುರ ಕಳಸ ಸ್ಥಾಪನೆ, 108 ಕಳಶಗಳ ಮಹಾಭಿಷೇಕ, ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಅಲಂಕಾರ ಸೇವೆ, ವಿಶೇಷ ಪೂಜೆ, ಗುರು ಅಷ್ಟೋತ್ತರ ಪೂಜೆ, ಮಹಾನೈವೇದ್ಯ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ಮಧ್ಯಾಹ್ನ 1.30ರಿಂದ ಮಹಾಪ್ರಸಾದ, 2.30ರಿಂದ ಧರ್ಮಸಭೆ, ಸಂಜೆ 5ಕ್ಕೆ ರಥೋತ್ಸವ, 7ಕ್ಕೆ ದೀಪೋತ್ಸವ , 8ಕ್ಕೆ ಮಹಾಪ್ರಸಾದ, ರಾತ್ರಿ 10ಕ್ಕೆ ಕಲಘಟಕಿಯ ಸಿರಿಗನ್ನಡ ಕಲಾ ಸಂಸ್ಕೃತಿ ಸಂಘದಿಂದ ‘ರಕ್ತ ರಾತ್ರಿ’ ಪೌರಾಣಿಕ ನಾಟಕ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.