ಅಂಕೋಲಾ: ತಾಲೂಕಿನ ‘ದರ್ಶಿನಿ ಸ್ಟೂಡಿಯೋ’ದಲ್ಲಿ ಮಂಗಳೂರು ದೇರಳಕಟ್ಟೆ ಜಸ್ಟೀಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ‘ಕ್ಷೇಮ ಹೆಲ್ತ್ ಕಾರ್ಡ್ ಕೇಂದ್ರ’ವನ್ನು ಪುರಸಭಾ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ದೀಪ ಬೆಳಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಲ್ಲ ಸೌಲಭ್ಯಗಳಿರುವ ಸುಸಜ್ಜಿತವಾದ ಈ ಆಸ್ಪತ್ರೆಯ ಕುರಿತಾಗಿ ಹೆಚ್ಚಿನ ವಿವರ ಹಾಗೂ ಹೆಲ್ತ್ ಕಾರ್ಡ್‍ನ ಸದುಪಯೋಗದ ಕುರಿತಂತೆ ಮಾಹಿತಿಗಳು ಇನ್ನು ಮುಂದೆ ಈ ಕೇಂದ್ರದಲ್ಲಿ ದೊರೆಯಲಿದೆ ಎಂದರು.
ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಖ್ಯಾತ ವೈದ್ಯ ಹಾಗೂ ಆಸ್ಪತ್ರೆಯ ಕಾರ್ಯನಿರ್ವಾಹಕ ಜಾಯ್ಸನ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಸಂಯೋಜಕ ಸಂಗಮಸೇವಾ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಸರ್ವರನ್ನೂ ಸ್ವಾಗತಿಸಿದರು. ಸ್ಟೂಡಿಯೋದ ಮಾಲಕರಾದ ಪ್ರಶಾಂತ ಶೆಟ್ಟಿ, ಸುಧಾ ಶೆಟ್ಟಿ ದಂಪತಿ ಉಪಸ್ಥಿತರಿದ್ದು ಸರ್ವರನ್ನೂ ವಂದಿಸಿದರು. ಹೆಲ್ತ್ ಕಾರ್ಡ್ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಮೊ.ಸಂ: 94491 27647 ಗೆ ಸಂಪರ್ಕಿಸಿ ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.