ಹಳಿಯಾಳ:ಪಟ್ಟಣದ ಕುಸ್ತಿ ವಸತಿ ಶಾಲೆಯ ವಿದ್ಯಾರ್ಥಿಗಳು 15 ವರ್ಷದೊಳಗಿನವರ ರಾಷ್ಟ್ರಮಟ್ಟದ ಯುವ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ಮೇ 26 ರಿಂದ ಕುಸ್ತಿ ಪಂದ್ಯಾವಳಿ ನಡೆಯಲಿದೆ.
ಗದಗ ನಗರದಲ್ಲಿ ಇತ್ತೀಚೆಗೆ ನಡೆದ ಅರ್ಹತಾ ಕುಸ್ತಿ ಪ್ರಕ್ರಿಯೆಯಲ್ಲಿ ಬಾಲಕಿಯರ ವಿಭಾಗದಲ್ಲಿ ಸೋನಲ್ ಲಾಂಬೋರೆ, ಕಾವ್ಯ ದಾನವೆನ್ನವರ್, ಲಕ್ಷ್ಮೀಪಾಟೀಲ್ ಪ್ರತಿಕ್ಷಾ ಬೋವಿ ,ಮನಿಷಾ ಸಿದ್ಧಿ ಹಾಗೂ ಬಾಲಕರ ವಿಭಾಗದಲ್ಲಿ ಗಜಾನನ ಚೌವಾಣ್, ನಿಂಗಪ್ಪ ಘಾಡೇಕರ್ ಮತ್ತು ಶುಭಂಗೌಡ ಆಯ್ಕೆಯಾಗಿದ್ದಾರೆ.
’15 ವರ್ಷದೊಳಗಿನವರ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗೆ ನಮ್ಮೂರಿನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಬಹಳ ಸಂತಸವಾಗಿದೆ.ಇದು ನಮ್ಮ ಜಿಲ್ಲೆಗೂ, ನಮ್ಮ ರಾಜ್ಯಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಇವರೆಲ್ಲರೂ ಭವಿಷ್ಯದಲ್ಲಿ ಉಜ್ವಲ ತಾರೆಗಳಾಗಿ ಮಿಂಚಲಿ’ ಎಂದು ಶಾಸಕ ಆರ್.ವಿ. ದೇಶಪಾಂಡೆ ಶುಭ ಹಾರೈಸಿದ್ದಾರೆ.