ಶಿರಸಿ: ತಾಲೂಕಿನ ಹುಳಗೋಳದ ಮೇಧಾ ಅನಂತ್ ಭಟ್ ಸಸ್ಯಶಾಸ್ತ್ರ ವಿಭಾಗದಲ್ಲಿ ಕಿರಾತಕಡ್ಡಿ ಹಾಗೂ ಅವುಗಳ ಸಸ್ಯ ಪ್ರಬೇಧಗಳಿಂದ ಗರ್ಭಕೋಶದ ಕ್ಯಾನ್ಸರ್ ನಿಯಂತ್ರಣ ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕೆ ಕರ್ನಾಟಕ ವಿಶ್ವ ವಿದ್ಯಾಲಯ ಪಿಎಚ್‌ಡಿ ಪ್ರಕಟಿಸಿದೆ.
ಧಾರವಾಡದ ಕವಿವಿ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎಚ್.ನಿರಂಜನಮೂರ್ತಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಲಾದ ಮಹಾ ಪ್ರಬಂಧದಲ್ಲಿ ಕಿರಾತಕಡ್ಡಿ ಸಸ್ಯ ಪ್ರಬೇಧಕ್ಕೆ ಸೇರಿದ ಔಷಧಿ ಗಿಡಗಳ ಕುರಿತು ಅಧ್ಯಯನ ಮಾಡಿ ಗರ್ಭಕೋಶದ ಕ್ಯಾನ್ಸರ್
ವಿರುದ್ಧ ಅವುಗಳ ಪರಿಣಾಮದ ಕುರಿತು ಸತತ ಐದು ವರ್ಷಗಳ ಅಧ್ಯಯನ ನಡೆಸಿ ರಚಿಸಲಾದ ಪ್ರಬಂಧಕ್ಕೆ ಈಗ ಪಿಎಚ್‌ಡಿ ಪದವಿ ಲಭಿಸಿದೆ.
ಯಲ್ಲಾಪುರ ವಜ್ರಳ್ಳಿಯ ಸೊಸೆಯಾದ ಮೇಧಾ ಹುಳಗೋಳದ ಅನಂತ ಭಟ್ ಹಾಗೂ ರಾಧಾ ಭಟ್ ಮಗಳು.