ಶಿರಸಿ: ತಾಲೂಕಿನ ಕ್ಯಾದಗಿಕೊಪ್ಪದಲ್ಲಿ ಬೈಕ್ ರ‍್ಯಾಲಿಗೆ ಚಾಲನೆ ನೀಡಲಾಯಿತು.
ಸದ್ಗುರು ಅವದೂತ ಕಲ್ಲೇಶ್ವರ ಮಹಾಸ್ವಾಮಿಯವರ ಶ್ರೀ ಗುರುಮಠದ ಜಾತ್ರಾ ಪ್ರಯುಕ್ತ ಹಮ್ಮಿಕೊಂಡಿರುವ ಬೈಕ್ ರ‍್ಯಾಲಿಗೆ ಸಮಾಜದ ಮುಖಂಡ ಭೀಮಣ್ಣ ನಾಯ್ಕ್ ಚಾಲನೆ ನೀಡಿದರು. ನಂತರ ಅವರು ಊರಿನ ಯುವಕರ ಗುಂಪಿನೊಂದಿಗೆ ಸುತ್ತಲಿನ ಹಳ್ಳಿಗಳಿಗೆ ಬೈಕ್ ನಲ್ಲಿ ತೆರಳಿ ಶ್ರೀ ಗುರುಮಠದಲ್ಲಿ ಸಮಾಪ್ತಿಗೊಳಿಸಿದರು.