ಹೊನ್ನಾವರ: ಯುವಾಬ್ರಿಗೇಡ್ ತಾಲೂಕು ಘಟಕದ ವತಿಯಿಂದ ತಾಲೂಕಿನ ಮಂಕಿಯ ಹಳೇಮಠ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಿಂದ ಭದ್ರಾಂಬಿಕೇಶ್ವರ ದೇವಸ್ಥಾನದವರೆಗೆ ಭವ್ಯ ಮೆರವಣಿಗೆಯ ಮೂಲಕ ವಿವೇಕ ಯಾತ್ರೆ ಕಾರ್ಯಕ್ರಮ ನಡೆಯಿತು.
ಈ ವೇಳೆ ಯುವಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಯವರಿಂದ ಗೋಪೂಜೆ, ಭಾರತ ಮಾತೆಗೆ ಪುಷ್ಪಾರ್ಚನೆ ನೆರವೇರಿಸಿ ಮಂಗಳ ಸಾರಥಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅರ್ಚಕರಿಗೆ ಸನ್ಮಾನ ಮಾಡಲಾಯಿತು. ಚಕ್ರವರ್ತಿ ಸೂಲಿಬೆಲೆಯವರಿಂದ ದಿಕ್ಸೂಚಿ ಭಾಷಣ ನಡೆಯಿತು.
ಈ ಸಂದರ್ಭದಲ್ಲಿ ಕರಾವಳಿ ವಿದ್ಯಾವರ್ಧಕ ಸಂಘದಿಂದ ಸೂಲಿಬೆಲೆಯವರಿಗೆ ಸನ್ಮಾನಿಸಲಾಯಿತು. ಮಂಗಳವಾರ ಮುಂಜಾನೆ ಚಕ್ರವರ್ತಿ ಸೂಲಿಬೆಲೆಯವರ ನೇತ್ರತ್ವದಲ್ಲಿ ಯುವಾಬ್ರಿಗೇಡ್ ಹಾಗೂ ಸ್ಥಳೀಯರಿಂದ ದೇವಸ್ಥಾನದ ಸಮೀಪದ ಕಲ್ಯಾಣಿಯನ್ನು ಸ್ವಚ್ಛಗೊಳಿಸಿದರು.