ಸಿದ್ದಾಪುರ: ಸಹಕಾರ ಕ್ಷೇತ್ರದಲ್ಲಿ ವಿಶ್ವಾಸ ಬಹುಮುಖ್ಯ. ಹಾಗೆಯೇ ರೈತರ, ಉದ್ದಿಮೆದಾರರ, ಜನಸಾಮಾನ್ಯರ ಆರ್ಥಿಕ ಪ್ರಗತಿಯಲ್ಲಿ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಕೊಡುಗೆ ಅಪಾರ ಎಂದು ಟಿ.ಎಂ.ಎಸ್ ಅಧ್ಯಕ್ಷ, ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ, ‘ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತ ಆರ್.ಎಂ.ಹೆಗಡೆ ಬಾಳೇಸರ ಹೇಳಿದರು.
ಸಿದ್ದಾಪುರದ ಟಿ.ಎಂ.ಎಸ್. ಸಭಾಂಗಣದಲ್ಲಿ ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾದ ರಾಘವೇಂದ್ರ ಶಾಸ್ತ್ರಿ ಬಿಳಗಿ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ‘ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತ ಆರ್.ಎಂ.ಹೆಗಡೆ ಬಾಳೇಸರ ವಹಿಸಿ ಮಾತನಾಡಿ, ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾದ ಶಾಸ್ತ್ರಿ ಅವರನ್ನು ಅಭಿನಂದಿಸಿದರು.
ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಡಾ.ರವಿ ಹೆಗಡೆ ಹೂವಿನಮನೆ ಮಾತನಾಡಿ, ಜನಪರ ಸೇವೆಗೆ ಶಾಸ್ತ್ರಿ ಅವರ ಆಯ್ಕೆ ಯೋಗ್ಯ ಎಂದು ಹೇಳಿದರು. ಟಿ.ಎಂ.ಎಸ್ ನಿರ್ದೇಶಕರುಗಳಾದ ಸುಧೀರ ಗೌಡರ್, ಜಿ.ಆರ್.ಹೆಗಡೆ ಹಳದೋಟ, ಕೆ.ಆರ್.ವಿನಾಯಕ, ರಮೇಶ ಹೆಗಡೆ ಕೊಡ್ತಗಣಿ, ಸುಬ್ರಹ್ಮಣ್ಯ ಹೆಗಡೆ, ಸಿ.ಎನ್.ಹೆಗಡೆ ತೆಂಗಾರ್ಮನೆ, ಎಂ.ಎನ್.ಹೆಗಡೆ ತಲೆಕೇರಿ ಹಾಗೂ ಹಿತ್ಲಕೊಪ್ಪ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿಜೇತ ಗೌಡರ್ ಕಲ್ಲೂರು, ಕೃಷಿ ಹುಟ್ಟುವಳಿಗಳ ಸಂಸ್ಕರಣ ಮತ್ತು ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ರಮಾನಂದ ಹೆಗಡೆ ಮಳಗುಳಿ ಮಾತನಾಡಿ ಅಭಿನಂದಿಸಿದರು.
ಗುರುಮೂರ್ತಿ ಹೆಗಡೆ ಕೊರ್ಲಕೈ, ಅರುಗಣಗೌಡರ್ ಹೊಸೂರು, ಜಿ.ಪಂ. ಮಾಜಿ ಸದಸ್ಯ ಈಶ್ವರ ನಾಯ್ಕ ಮನಮನೆ ಮಾತನಾಡಿದರು. ನಿರ್ದೇಶಕರಾಗಿ ಆಯ್ಕೆಗೊಂಡ ರಾಘವೇಂದ್ರ ಶಾಸ್ತ್ರಿ ಮಾತನಾಡಿ, ತನ್ನನ್ನು ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆ ಹೇಳಿದರು. ಮತ ನೀಡಿದ, ಮತ ನೀಡದ ಎಲ್ಲರನ್ನು ವಿಶ್ವಾಸ- ಪ್ರೀತಿಯಿಂದ ನೋಡುವುದಾಗಿ ಹೇಳಿ ಬ್ಯಾಂಕಿನ ಘನತೆಯನ್ನು ಕಾಯ್ದುಕೊಂಡು ಬರುವೆ ಎಂದರು.
ಸಿ.ಎಸ್.ಗೌಡರ್ ಹೆಗ್ಗೋಡ್ಮನೆ ಸ್ವಾಗತಿಸಿ ವಂದಿಸಿದರು.