ಶಿರಸಿ: ತಾಲೂಕಿನ ಭಾಶಿ ಗ್ರಾಮ ಪಂಚಾಯತ ವ್ಯಾಪ್ತಿಯ ನರೂರ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ದೇವಸ್ಥಾನದ ಆವಾರದಲ್ಲಿ ಭಕ್ತಾದಿಗಳೊಂದಿಗೆ ಸಚಿವ ಶಿವರಾಮ ಹೆಬ್ಬಾರ್ ಕೆಂಡ ಹಾಯ್ದಿಯ್ದಾರೆ.
ಮಂಗಳವಾರ ಭಾಶಿಯ ಶ್ರೀ ವೀರಭದ್ರೇಶ್ವರ ಹಾಗೂ ನಾಗಚೌಡೇಶ್ವರಿ ನೂತನ ಶಿಲಾ ಮೂರ್ತಿಗಳ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಸಚಿವ ಶಿವರಾಮ ಹೆಬ್ಬಾರ್ ಪಾಲ್ಗೊಂಡಿದ್ದರು. ಈ ವೇಳೆ ಪಕ್ಕದಲ್ಲಿ ಹರಕೆ ಸಲ್ಲಿಸುವವರಿಗಾಗಿ ಕೆಂಡ ಹಾಯುವ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಅಳುಕಿಲ್ಲದೆ ಕೆಂಡ ಹಾಯ್ದರು. ಭಕ್ತರೊಡನೆ ಸಚಿವ ಶಿವರಾಮ ಹೆಬ್ಬಾರ್ ಕೆಂಡ ಹಾಯ್ಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಗಳಿಸಿದೆ.