ಶಿರಸಿ: ದಿ ತೋಟಗಾರ್ಸ ರೂರಲ್ ಕೋ ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿ (ಟಿ ಆರ್ ಸಿ) ಹಾಗೂ ತೋಟಗಾರ್ಸ ಗ್ರೀನ್ ಗ್ರೂಪ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿಗಳ ಸಹಯೋಗದಲ್ಲಿ ಜಿ.ಜಿ.ಹೆಗಡೆ ಹುಲೇಮಳಗಿ ಅವರ ಸ್ಮರಣಾರ್ಥ ‘ಸಿಮರೂಬಾ’ ಬೆಳೆಯ ಮಹತ್ವ ಹಾಗೂ ಅವಕಾಶಗಳ ಕುರಿತು ಕೃಷಿ ಮಾಹಿತಿ ಕಾರ್ಯಾಗಾರವು ಮೇ 11 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಟಿ ಆರ್ ಸಿ ಸಭಾಭವನದಲ್ಲಿ ನಡೆಯಲಿದೆ.
ಟಿ ಆರ್ ಸಿ ನಿರ್ದೇಶಕರಾದ ಜಿ.ವಿ.ಜೋಶಿ ಕಾಗೇರಿ ಅಧ್ಯಕ್ಷತೆ ವಹಿಸಲಿದ್ದು ಪ್ರಗತಿಪರ ಕೃಷಿಕರಾದ ಕೆ.ಎಂ.ಹೆಗಡೆ ಭೈರುಂಭೆ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಸ್.ಜಿ.ಹೆಗಡೆ ಗೋಪಿನಾಥಪುರ ಆಗಮಿಸುವರು.
ಟಿ ಆರ್ ಸಿ ಉಪಾಧ್ಯಕ್ಷರಾದ ಲೋಕೇಶ ಜಿ. ಹೆಗಡೆ ಹುಲೇಮಳಗಿ ಉಪಸ್ಥಿತರಿರುವರು. ಸಂಪನ್ಮೂಲ ವ್ಯಕ್ತಿಗಳಾಗಿ ಕ್ಯಾನ್ಸರ್ ನಿಯಂತ್ರಣದಲ್ಲಿ ಸಿಮರೂಬಾದ ಮಹತ್ವದ ಕುರಿತ ಅಧ್ಯಯನಕಾರರಾದ ರಾಮಚಂದ್ರ ಪಂಡರಿ ಪಾಲ್ಗೊಳ್ಳುವರೆಂದು ಟಿ ಆರ್ ಸಿ ಪ್ರಕಟಣೆಯಲ್ಲಿ ತಿಳಿಸಿದೆ.