ಮುಂಡಗೋಡ: ಹುಬ್ಬಳ್ಳಿಯಿಂದ ಶಿರಸಿ ಕಡೆಗೆ ಹೊರಟಿದ್ದ ಬೊಲೇರೊ ಪಿಕಪ್ ಒಂದು ಮುಂಡಗೋಡ ಬಳಿ ಸೇತುವೆಯಿಂದ ಬಿದ್ದು ಪಲ್ಟಿಯಾಗಿ ಚಾಲಕ ಸ್ಥಳದಲ್ಲೆ ಮೃತಪಟ್ಟ ದುರ್ಘಟನೆ ಸಂಭವಿಸಿದೆ.
ಈರುಳ್ಳಿ ಹೊತ್ತು ಬರುತ್ತಿದ್ದ ಬೊಲೇರೊ ಪಿಕಪ್ ಮುಂಡಗೋಡ ಗಡಿ ಭಾಗದ ಅರಿಶಿಣಗೇರಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ ಚಾಲಕ ಶಿರಸಿಯ ರಾಮನಬೈಲ್ ನಿವಾಸಿ ಶಿವಬಸಪ್ಪ ಸ್ಥಳದಲ್ಲೇ ಮೃತಪಟ್ಟಿದ್ದು, ವಾಹನ ಮಾಲಿಕ ಶಾಂತಪ್ಪ ಗಂಬೀರ ಗಾಯಗೊಂಡು ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಾಹನವು ಸೇತುವೆ ಕೆಳಗೆ ಬಿದ್ದ ಪರಿಣಾಮ ಸಂಪೂರ್ಣ ಜಖಂಗೊಂಡಿದೆ. ಸಿಪಿಐ ಸಿದ್ದಪ್ಪ ಸಿಮಾನಿ ಹಾಗೂ ಇತರ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು ಹೊರತೆಗೆದು ಮುಂಡಗೋಡ ಸರ್ಕಾರ್ರಿ ಆಸ್ಪತ್ರೆಗೆ ದಾಖಲಿಸಿದ್ದು, ವಾಹನವನ್ನು ಕ್ರೇನ್ ಮೂಲಕ ಹೊರತೆಗೆದಿದ್ದಾರೆ.