ಯಲ್ಲಾಪುರ : ತಾಲ್ಲೂಕಿನ ಮಾವಿನಮನೆ ಮಲವಳ್ಳಿ ಗ್ರಾಮ ಪಂಚಾಯ್ತಿ ಪಿಡಿಓ ಅವರ ವರ್ಗಾವಣೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಮಲವಳ್ಳಿ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಗ್ರಾಮಸ್ಥರು ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಮನವಿ ಸಲ್ಲಿಸಿದರು.
ಕಳೆದ ಒಂದು ವರ್ಷದಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಮಾವಿನಮನೆ- ಮಲವಳ್ಳಿಯ ಪ್ರಭಾರೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ ಅಂಕದ ಅವರನ್ನು ಏಕಾಏಕಿ ತಾಲ್ಲೂಕಿನಿಂದ ಹೊರಗೆ ವರ್ಗಾವಣೆ ಮಾಡಲಾಗಿರುತ್ತದೆ. ತಾಲ್ಲೂಕು ಕೇಂದ್ರದಿಂದ 40 ಕಿಲೋ ಮೀಟರ್ ದೂರವಿರುವ ಬರಲು ಮಲವಳ್ಳಿಗೆ ಯಾವ ಅಧಿಕಾರಿಯೂ ಸಿದ್ಧನಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಅವರನ್ನು ಬೇರೆಡೆ ವರ್ಗಾವಣೆ ಮಾಡಬಾರದು, ಒಂದು ವೇಳೆ ವರ್ಗಾವಣೆ ಮಾಡುವುದಾದರೂ ಬೇರೆ ಪಿಡಿಓ ಇಲ್ಲಿಗೆ ಬಂದನಂತರವೇ ಇವರನ್ನು ಇಲ್ಲಿಂದ ರಿಲೀವ್ ಮಾಡಬೇಕು ಎಂದು ಗ್ರಾ.ಪಂ. ಸದಸ್ಯರು ಒತ್ತಾಯಿಸಿದ್ದಾರೆ. ಮನವಿಯ ಪ್ರತಿಯನ್ನು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೂ ಕಳುಹಿಸಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷೆ ಮಂಗಳಾ ಕುಣಬಿ, ಉಪಾಧ್ಯಕ್ಷ ಸುಬ್ಬಣ್ಣ ಕುಂಟೆಗಾಳಿ, ಸದಸ್ಯರಾದ ದೀಪಕ ಭಟ್ಟ, ಪುಷ್ಪಾ ಭಟ್ಟ, ಸವಿತಾ ಪೂಜಾರಿ, ಪಾರ್ವತಿ ಭಟ್ಟ, ಮಹಾಬಲೇಶ್ವರ ಭಟ್ಟ, ರಂಜನಾ ಹುಲಸ್ವಾರ,ಹಾಗೂ ಗ್ರಾಮಸ್ಥರಿದ್ದರು.