ಯಲ್ಲಾಪುರ: ಪಟ್ಟಣದ ಶಕ್ತಿ ಗಣಪತಿ ದೇವಸ್ಥಾನದ ಆವಾರದಲ್ಲಿ ಹಿಟ್ಟಿನಬೈಲ್ ಶಿವರಾಮ ಭಟ್ಟರವರ ಪುಸ್ತಕ ಬಿಡುಗಡೆ ಸಮಾರಂಭದ ನಿಮಿತ್ತ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು.
ಸಂಗೀತ ಶಿಕ್ಷಕ ವಿದ್ವಾನ ಗಣಪತಿ ಹೆಗಡೆ ಯಮನ್ ರಾಗದಲ್ಲಿ ಮೇರೋ ಮನ ಬಾಂದ್ ತ್ರಿತಾಲ್‍ದಲ್ಲಿ ಚೀಜ್ ಹಾಡಿ, ಬಾರೆ ನಮ್ಮ ಮನೆತನಕ, ಗಜಮುಖನೆ ಸಿದ್ದಿವಿನಾಯಕನೇ, ಕಾಯೋಕರುನಾನಿಧಿ, ಭೈರವಿಯೊಂದಿಗೆ ಸುಂದರವಾಗಿ ಹಾಡಿ ರಂಜಿಸಿದರು.
ಅವರಿಗೆ ಹಾರ್ಮೋನಿಯಮ್ ನಲ್ಲಿ ಸತೀಶ ಭಟ್ಟ ಹೆಗ್ಗಾರ,ತಬಲಾದಲ್ಲಿ ಎನ್.ಜಿ.ಹೆಗಡೆ ಕೆಪ್ಪೆಕೆರೆ , ಅದಿತಿ ಭಟ್ಟ ತಂಬೂರ ಸಾಥ್ ನೀಡಿದರು. ಅಂತೆಯೆ ಶೃತಿ ಭಟ್ಟ ಹಿಟ್ಟಿನಬೈಲ್ ಪೂರ್ವಿ ರಾಗದಲ್ಲಿ ಭಕ್ತಿ ಸಂಗೀತ ಹಾಡಿದರು. ಉಮೇಶ ಬಿಗಾರ್ ಹಾರ್ಮೋನಿಯಮ್, ನಾರಾಯಣ ಭಟ್ಟ ತಬಲಾ ಸಾಥ್ ನೀಡಿದರು.