ಶಿರಸಿ: ಕರ್ನಾಟಕ ಅಥ್ಲೇಟಿಕ್ ಅಸೋಸಿಯೇಶನ್ ಉಡುಪಿಯಲ್ಲಿ ದಿ. ೯ ರಂದು ಸಂಘಟಿಸಿದ ೨೦ ವರ್ಷದ ಒಳಗಿನ ರಾಜ್ಯ ಮಟ್ಟದ ೪೦೦ ಮೀ ಹರ್ಡಲ್ಸ್ ನಲ್ಲಿ ಶಿರಸಿಯ ಹಾಲಿ ಉಡುಪಿ ಕ್ರೀಡಾವಸತಿ ಶಾಲೆಯ ಹಾಗೂ ಉಡುಪಿಯ ಸೆಂಟ್ ಸಿಷಿಲೀಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕು. ರಕ್ಷಿತ್ ರವೀಂದ್ರ ೨ ನೇ ಸ್ಥಾನ ಪಡೆದು ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾನೆ.
ಈತನ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪಾಲಕರು, ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಹರ್ಡಲ್ಸ್ ನಲ್ಲಿ ಬೆಳ್ಳಿಪದಕ ಪಡೆದ ರಕ್ಷಿತ್
