ದಾಂಡೇಲಿ: ಹಳಿಯಾಳ ಉಪವಿಭಾಗದಿಂದ ಶಿರಸಿ ಅರಣ್ಯ ಉಪವಿಭಾಗಕ್ಕೆ ವರ್ಗಾವಣೆಗೊಂಡ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಅಜ್ಜಯ್ಯ ಜಿ.ಆರ್. ಅವರನ್ನು ನಗರದ ಹಳೆದಾಂಡೇಲಿಯ ಹಾರ್ನ್‍ಬಿಲ್ ಸಭಾಭವನದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ದಾಂಡೇಲಿ ಟಿಂಬರ್ & ಕಾರ್ಪೆಂಟರ್ ಅಸೋಸಿಯೇಶನ್ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ದಾಂಡೇಲಿ ಟಿಂಬರ್ & ಕಾರ್ಪೆಂಟರ್ ಅಸೋಸಿಯೇಶನ್ ಅಧ್ಯಕ್ಷ ಪ್ರೇಮಾನಂದ ಗವಸ ಹಾಗೂ ಸಂಘದ ಪದಾಧಿಕಾರಿಗಳಾದ ಜಾನ್ಸನ್ ಎಸ್.ರೋಡ್ರಿಗಸ್, ಜೈಮ್ಸ್ ಕಲ್ಕೋಟಿ, ರಫೀಕ್ ಖಾನ್, ನಜೀರ್ ಕಿಲ್ಲೇದಾರ, ಎ.ಎಂ.ರಾವುತ್, ಇಮ್ತಿಯಾಜ್ ಶೇಖ್, ಎಂ.ಜಿ.ರಾವತ್ ಹಾಗೂ ಮೊದಲಾದವರು ಇದ್ದರು.