ದಾಂಡೇಲಿ: ಮಹಿಳೆಯರ ಸುರಕ್ಷತೆಗಾಗಿ ಭಯಮುಕ್ತ ಕರ್ನಾಟಕ ಅಭಿಯಾನದ ಜನಜಾಗೃತಿ ಮೂಡಿಸಲು ಬೆಂಗಳೂರು ರೋಟರಿ ಇ- ಕ್ಲಬ್, ವಿ- ಸಖಿ ಸಂಸ್ಥೆಯ ಸಹಯೋಗದೊಂದಿಗೆ ಬೆಂಗಳೂರಿನಿಂದ ಹಮ್ಮಿಕೊಂಡಿರುವ ಬೈಕ್ ಟೂರ್ 18 ಜಿಲ್ಲೆಗಳನ್ನು ಮುಗಿಸಿ ನಗರಕ್ಕೆ ಆಗಮಿಸಿದೆ.
ನಗರದ ಅಂಬೇವಾಡಿಯಲ್ಲಿರುವ ಶ್ರೀಯೋಗ್ ಇನ್ ರೆಸಾರ್ಟಿಗೆ ಆಗಮಿಸಿದ ಅಭಿಯಾನದ ಸದಸ್ಯರುಗಳಾದ ಬೆಂಗಳೂರಿನ ರಾಜಲಕ್ಷ್ಮೀ, ನೀತಾ, ಸ್ವಾತಿ ಮತ್ತು ಕೀರ್ತಿನಿಯವರನ್ನು ನಗರದ ರೋಟರಿ ಕ್ಲಬ್ ಹಾಗೂ ಇನ್ನರ್‍ವ್ಹೀಲ್ ಕ್ಲಬ್ ಗೌರವಪೂರ್ವಕವಾಗಿ ನಗರಕ್ಕೆ ಬರಮಾಡಿಕೊಂಡಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಯೋಗೇಶ್ ಸಿಂಗ್, ಕಾರ್ಯದರ್ಶಿ ಮಿಥುನ್ ನಾಯಕ, ಪ್ರಮುಖರುಗಳಾದ ಅರುಣಾದ್ರಿ ರಾವ್, ಡಾ.ಎಸ್.ಎಲ್.ಕರ್ಕಿ, ಆರ್.ಪಿ.ನಾಯ್ಕ, ರಾಹುಲ್ ಬಾವಾಜಿ, ಡಾ.ಅಸೀಪ್ ದಫೇದಾರ್, ಇನ್ನರ್‍ವ್ಹೀಲ್ ಕ್ಲಬ್‍ನ ಕಾರ್ಯದರ್ಶಿ ಸ್ನೇಹಲ್ ಕಂಬದಕೋಣೆ, ಪದಾಧಿಕಾರಿಗಳಾದ ಜ್ಯೋತಿ ಕಲ್ಲಣ್ಣವರ, ರೇಷ್ಮಾ ಬಾವಾಜಿ, ಡಾ.ಜಹೇರಾ ದಫೇದಾರ, ಭಾರತಿ ನಾಯ್ಕ, ರಶ್ಮಿ ನಾಯ್ಕ, ವಿಜಯ ಕರ್ಕಿ, ಬಿಬಿ ಸೋಗ್ರಾ ಮೊದಲಾದವರು ಇದ್ದರು.