• Slide
    Slide
    Slide
    previous arrow
    next arrow
  • ಶಿರ್ಲೆ ಜಲಪಾತದ ಬಳಿ ನಾಪತ್ತೆಯಾದವರು ಇಂದು ಪತ್ತೆ

    300x250 AD

    ಯಲ್ಲಾಪುರ: ತಾಲೂಕಿನ ಶಿರ್ಲೆ ಜಲಪಾತ ವೀಕ್ಷಣೆಗೆಂದು ಹುಬ್ಬಳ್ಳಿಯಿಂದ ಬಂದವರು ಮಾರ್ಗಮರ್ದಯೆ ಕಾಡಿನಲ್ಲಿ ನಾಪತ್ತೆಯಾಗಿದ್ದು, ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.
    ಹುಬ್ಬಳ್ಳಿಯ ನವನಗರದ ಮೆಹಬೂಬ್, ಇಮ್ಮಿಯಾಜ್, ಅಹಮದ್, ಶಾನವಾಜ್, ಅಲ್ತಾಫ್ ಹಾಗೂ ಆಸಿಫ್ ಮೂರು ಡಿಯೋ ಸ್ಕೂಟರ್‍ನಲ್ಲಿ ಗುರುವಾರ ಜಲಪಾತಕ್ಕೆ ತೆರಳಿದ್ದರು. ಹಳ್ಳ ದಾಟಲು ಇದ್ದ ಕಾಲುಸಂಕದಲ್ಲಿ ಅವರು ಸಾಗಿದ್ದರು. ಆದರೆ, ನೀರಿನ ಪ್ರವಾಹ ಹೆಚ್ಚಾಗಿ, ಕಾಲುಸಂಕ ಕೊಚ್ಚಿಕೊಂಡು ಹೋಯಿತು. ಇದರಿಂದ ಪುನಃ ಬರಲಾಗದೇ ಜಲಪಾತವಿರುವ ಗುಡ್ಡದ ಮತ್ತೊಂದು ಭಾಗದಲ್ಲಿ ರಾತ್ರಿ ಕಳೆದರು. ಶುಕ್ರವಾರ ಬೆಳಿಗ್ಗೆ ದಾರಿ ಹುಡುಕುತ್ತ ರಾಘವೇಂದ್ರ ಭಟ್ಟ ಎಂಬವರ ತೋಟಕ್ಕೆ ತಲುಪಿದರು. ಅವರು ಬೆಳಿಗ್ಗೆ ತೋಟಕ್ಕೆ ತೆರಳಿದ್ದಾಗ ತೋಟದ ಮೂಲೆಯಲ್ಲಿ ಆರು ಮಂದಿ ನಡುಗುತ್ತ ನಿಂತಿರುವುದು ಕಂಡುಬಂತು.
    ನಾಪತ್ತೆಯಾಗಿದ್ದವರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಹುಬ್ಬಳ್ಳಿಯಿಂದ ಬಂದ ಅವರ ಸಂಬಂಧಿಕರು ತೀವ್ರವಾಗಿ ಹುಡುಕಾಟ ನಡೆಸಿದ್ದರು. ಪತ್ತೆಯಾದ ಅವರನ್ನು ಪೆÇಲೀಸ್ ಸಿಬ್ಬಂದಿಗೆ ಒಪ್ಪಿಸಲಾಯಿತು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top