ಯಲ್ಲಾಪುರ : ತಾಲೂಕಿನ ನಂದೊಳ್ಳಿ ಸಮೀಪದ ಕುಂಕಿಯಲ್ಲಿ ಪ್ರಸಿದ್ಧ ಕಲಾವಿದರಿಂದ ಗಾನ ವೈಭವ ಕಾರ್ಯಕ್ರಮ ರವಿವಾರ ಸಂಜೆ ನಡೆಯಿತು.
ಭಾಗವತ ವಿದ್ವಾನ್ ಗಣಪತಿ ಭಟ್ಟ ಯಕ್ಷಗಾನದ ವಿವಿಧ ಪೌರಾಣಿಕ ಪ್ರಸಂಗಗಳ ಪದ್ಯಗಳನ್ನು ಪ್ರಸ್ತುತಪಡಿಸಿದರು. ಮದ್ದಲೆವಾದಕರಾಗಿ ಶಂಕರ ಭಾಗ್ವತ ಹಾಗೂ ಗಣಪತಿ ಭಾಗ್ವತ ಕವಾಳೆ ಭಾಗವಹಿಸಿದ್ದರು. ಸಂಘಟಕ ಗಣಪತಿ ಭಟ್ಟ ಕಲಾವಿದರನ್ನು ಗೌರವಿಸಿದರು.