ದಾಂಡೇಲಿ: ನಗರದ ಹಳೆದಾಂಡೇಲಿಯಲ್ಲಿರುವ ಡಿವೈಎಸ್ಪಿ ಕಚೇರಿ ಹತ್ತಿರದ ರಸ್ತೆಯಲ್ಲಿ ಸರಕು ತುಂಬಿದ ಲಾರಿಯೊಂದು ಹೂತೋಗಿರುವ ಘಟನೆ ಶನಿವಾರ ನಡೆದಿದೆ.
ಈ ರಸ್ತೆಯಲ್ಲಿ ಯುಜಿಡಿ ಕಾಮಗಾರಿಗಾಗಿ ರಸ್ತೆ ಅಗೆಯಲಾಗಿ ಪೈಪ್ಲೈನ್ ಕಾಮಗಾರಿ ಮುಗಿದಿದ್ದರೂ, ಹದಗೆಡಿಸಿದ ರಸ್ತೆಯನ್ನು ದುರಸ್ತಿ ಮಾಡದೇ ಇರುವುದರಿಂದ ಅಗೆದು ಪೈಪ್ಲೈನ್ ಹಾಕಿ ಮುಚ್ಚಿದ ಕಡೆ ಸರಕು ತುಂಬಿದ ಲಾರಿ ಹೂತೋಗಿದೆ. ತಕ್ಷಣವೆ ಸ್ಥಳೀಯರು ಸೇರಿ ಲಾರಿ ಪಲ್ಟಿಯಾಗಿ ಅನಾಹುತವಾಗದಿರಲೆಂದು ಕಂಬಗಳನ್ನು ಒರಗಿಸಿ ನಿಲ್ಲಿಸಿಟ್ಟಿದ್ದಾರೆ. ಆನಂತರ ಹೂತೋದ ಲಾರಿಯನ್ನು ಮೇಲಕ್ಕೆತ್ತಿ ಮುಂದಕ್ಕೆ ಎಳೆದೊಯ್ಯಲಾಯಿತು.