ಸಿದ್ದಾಪುರ: ಅರೆಹೊಳೆ ಪ್ರತಿಷ್ಠಾನವು ಸಾಮಾಜಿಕ ಮುಂದಾಳು ಗಣಪಯ್ಯ ಅವರ ಸ್ಮರಣಾರ್ಥ, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಸಾಧಕರಿಗೆ ನೀಡುವ ವಾರ್ಷಿಕ ಪ್ರಶಸ್ತಿ, 2022 ನೇ ಸಾಲಿನ ‘ಅರೆಹೊಳೆ ಗಣಪಯ್ಯ ಸ್ಮಾರಕ ಪ್ರಶಸ್ತಿ’ಗೆ ತಾಲೂಕಿನ ಕಲಗದ್ದೆಯ ವಿನಾಯಕ ಹೆಗಡೆಯವರು ಆಯ್ಕೆಯಾಗಿದ್ದಾರೆ.
ಯಕ್ಷಗಾನ ಕಲಾವಿದರಾಗಿ, ಕಲಗದ್ದೆಯಲ್ಲಿ ಯಕ್ಷನಾಟ್ಯ ವಿನಾಯಕ ದೇವಸ್ಥಾನವನ್ನು ಸ್ಥಾಪಿಸಿ, ನಿರಂತರ ಕಲಾ ಸೇವೆಯನ್ನು ಮಾಡುತ್ತಿರುವ ಇವರು, ಶಂಭು ಶಿಷ್ಯ ಯಕ್ಷಗಾನ ಪ್ರತಿಷ್ಠಾನದ ಮೂಲಕ ಪ್ರದರ್ಶನಗಳನ್ನೂ ನೀಡುತ್ತಿದ್ದಾರೆ. ಕಲಗದ್ದೆಯನ್ನು ರಾಜ್ಯಾದ್ಯಂತ ಪ್ರೇಕ್ಷಣೀಯ ಪುಣ್ಯಕ್ಷೇತ್ರವನ್ನಾಗಿ, ಏಕವ್ಯಕ್ತಿಯಾಗಿ ನಿರ್ಮಿಸಿದ್ದಾರೆ.
ಪ್ರಶಸ್ತಿ ಪತ್ರ, ಫಲಕ ಹಾಗೂ ಗೌರವ ಧನವನ್ನೊಳಗೊಂಡ ಪ್ರಶಸ್ತಿಯನ್ನು ಮೇ.15 ರಂದು ಅರೆಹೊಳೆಯಲ್ಲಿ ನಡೆಯಲಿರುವ ಪ್ರಥಮ ವರ್ಷದ ಗಣಪಯ್ಯ ಸಂಸ್ಮರಣೆಯಂದು ಗಣ್ಯರ ಉಪಸ್ಥಿತಿಯಲ್ಲಿ ಪ್ರದಾನಿಸಲಾಗುತ್ತಿದೆ ಎಂದು ಪ್ರತಿಷ್ಠಾನ ಅಧ್ಯಕ್ಷ ಸದಾಶಿವರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.