• Slide
    Slide
    Slide
    previous arrow
    next arrow
  • ಹೊನ್ನಾವರದಲ್ಲಿ ಮೊಳಗಿದ ಅರಣ್ಯವಾಸಿಗಳ ಜಾಗೃತ ಧ್ವನಿ;ಅರಣ್ಯ ಭೂಮಿ ಹಕ್ಕಿಗೆ ಸರಕಾರದ ಚಿಂತನೆ ಅಗತ್ಯ

    300x250 AD

    ಹೊನ್ನಾವರ: ಜಿಲ್ಲಾದ್ಯಂತ ಆಗಮಿಸಿದ ಸಹಸ್ರಾರು ಸಂಖ್ಯೆಯ ಅರಣ್ಯವಾಸಿಗಳು ಮೇ 7 ರಂದು ವಿವಿಧ ಬಗೆಯ ಕಲಾ ತಂಡ, ವಾದ್ಯ, ವೇಷ-ಭೂಷಣಗಳೊಂದಿಗೆ ಅರಣ್ಯವಾಸಿಗಳ್ನನ ಉಳಿಸಿ- ಜಾಥದಲ್ಲಿ ಪಾಲ್ಗೋಳ್ಳುವಿಕೆಯಿಂದ ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿ ವ್ಯಾಪಕ ಜಾಗೃತ ಮೂಡಿಸುವ ಹಾಗೂ ಸರಕಾರಕ್ಕೆ ಅರಣ್ಯವಾಸಿ ಸಮಸ್ಯೆಗೆ ಸ್ಫಂದಿಸಲು ಅಗ್ರಹಿಸಿ ಜರುಗಿದ ರ್ಯಾಲಿಯಿಂದ ಅರಣ್ಯ ಭೂಮಿ ಹಕ್ಕಿಗಾಗಿ ಸರಕಾರ ಗಂಭೀರ ಚಿಂತನೆ ಜರುಗಿಸುವ ಅಭಿಪ್ರಾಯ ಮೂಡಿಬಂದವು.

    ಅರಣ್ಯ ಭೂಮಿ ಹಕ್ಕು ಹೋರಾಟದ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತ್ರತ್ವದಲ್ಲಿ ಅರಣ್ಯ ಭೂಮಿಯಲ್ಲಿ ವಾಸ್ತವ್ಯ ಹಾಗೂ ಸಾಗುವಳಿಗಾಗಿ ಅವಲಂಭಿತವಾಗಿರುವಂತಹ ಅರಣ್ಯವಾಸಿಗಳು ಬೀದಿಗಿಳಿದು ಅರಣ್ಯ ಭೂಮಿ ಹಕ್ಕಿನ ಹೋರಾಟದ 31 ವರ್ಷದ ಇತಿಹಾಸದಲ್ಲಿಯೇ ವಿಶಿಷ್ಟ ರೀತಿಯಲ್ಲಿ ರ್ಯಾಲಿಯಲ್ಲಿ ಭಾಗವಹಿಸುವಿಕೆಯಿಂದ ಭೂಮಿ ಹಕ್ಕಿಗಾಗಿ ಅಗ್ರಹಿಸಿರುವುದು ರ್ಯಾಲಿಯ ವಿಶೇಷವಾಗಿತ್ತು.

    ಅರಣ್ಯವಾಸಿಗಳಿಗೆ ಜಾಗೃತ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಜಾಥವು ಜಿಲ್ಲಾದ್ಯಂತ 370 ಹಳ್ಳಿಗಿಂತಲೂ ಮಿಕ್ಕಿ ‘ಹೋರಾಟದ ವಾಹಿನಿ’ ಮೂಲಕ ಸುಮಾರು 5000 ಕೀ.ಮೀ ಅರಣ್ಯವಾಸಿಗಳ ಪ್ರದೇಶದಲ್ಲಿ ಸಂಚರಿಸಿ ಇಂದು ಜಾಥದ ರ್ಯಾಲಿಯ ನಂತರ ಬೃಹತ್ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

    ಪರಿಸರ ರಕ್ಷಣೆ, ಪೋಷಣೆ, ಸಂರಕ್ಷಣೆ ಶ್ರೇಯಸ್ಸಿಗೆ ಪದ್ಮಶ್ರೀ ಪ್ರಶಸ್ತಿ ವಿಜೇತೆಯಾಗಿರುವ ಶ್ರೀಮತಿ ತುಳಸಿ ಗೌಡ ಅವರನ್ನು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಸನ್ಮಾನಿಸಿರುವುದು ಕಾರ್ಯಕ್ರಮದ ಮೌಲತ್ಯತೆಯನ್ನು ಹೇಚ್ಚಿಸಲು ಕಾರಣವಾಯಿತು.

    300x250 AD

    69,733 ಅರ್ಜಿ ತಿರಸ್ಕಾರ:
    ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಗ್ರಾಮೀಣ ಭಾಗದ ಅತೀಕ್ರಮಣದಾರರು ವಾಸ್ತವ್ಯ ಹಾಗೂ ಸಾಗುವಳಿಗಾಗಿ ಸಲ್ಲಿಸಿರುವ ಒಟ್ಟೂ ಅರ್ಜಿ 89167 ಅವುಗಳಲ್ಲಿ 69733 ಅರ್ಜಿಗಳು ತಿರಸ್ಕಾರವಾಗಿದ್ದು ತಿರಸ್ಕಾರವಾಗಿರುವ ಅರ್ಜಿಗಳು ಶೇ 78.20 ರಷ್ಟು ಆಗಿವೆ. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಜಿಲ್ಲೆಯಲ್ಲಿ ಬುಡಕಟ್ಟು 1331 ಪಾರಂಪರಿಕ ಅರಣ್ಯವಾಸಿಗಳಿಗೆ 398 ಹಾಗೂ ಸಮುದಾಯ ಉದ್ದೇಶಕ್ಕೆ 1126 ಒಟ್ಟೂ 2852 ಹೀಗೆ ಶೇಕಡವಾರು ಬಂದಿರುವಂಥ ಗ್ರಾಮೀಣ ಭಾಗದ ಅರ್ಜಿಯಲ್ಲಿ ಶೇ 3.2 ರಷ್ಟು ಮಾತ್ರ ಹಕ್ಕು ಪ್ರಾಪ್ತವಾಗಿದೆ ಎಂದು ರವೀಂದ್ರ ನಾಯ್ಕ ತಿಳಿಸಿದರು.

    ಸುಫ್ರೀಂ ಕೋರ್ಟನಲ್ಲಿ ರಾಜ್ಯಸರಕಾರ ಮೇ 30 ರ ಒಳಗೆ ಪ್ರಮಾಣ ಪತ್ರ ಸಲ್ಲಿಸಬೇಕೆಂದು ಅರಣ್ಯವಾಸಿಗಳ ಒತ್ತಾಯಕ್ಕೆ ಸರಕಾರದ ಸ್ಫಂದನೆಯ ಕುರಿತು ಅರಣ್ಯವಾಸಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.

    ಜಾಥದಲ್ಲಿ ವಿವಿಧ ತಾಲೂಕ ಅಧ್ಯಕ್ಷರಾದ ಭಿಮ್ಸಿ ವಾಲ್ಮೀಕಿ ಯಲ್ಲಾಪುರ, ಶಿವಾನಂದ ಜೋಗಿ ಮುಂಡಗೋಡ, ಲಕ್ಷ್ಮಣ ಮಾಳ್ಳಕ್ಕನವರ ಶಿರಸಿ, ಮಂಜುನಾಥ ಮರಾಠಿ ಕುಮಟ, ಚಂದ್ರಕಾಂತ ಕೋಚರೆಕರ ಹೋನ್ನಾವರ, ಸೀತಾರಾಮ ಗೌಡ ಸಿದ್ಧಾಪುರ, ಪಾಂಡುರಂಗ ನಾಯ್ಕ ಬೆಳಕೆ, ಹೋನ್ನಾವರ ನಗರ ಅಧ್ಯಕ್ಷ ಸುರೇಶ್ ಮೇಸ್ತ, ಜಿಲ್ಲಾ ಸಂಚಾಲಕ ಜಿ ಎಮ್ ಶೆಟ್ಟಿ, ಇನಾಯತ ಸಾಬಂದ್ರಿ, ವಿನೋಧ ನಾಯ್ಕ ಯಲಕೊಟಗಿ, ಸುಬ್ರಮಣ್ಯ ನಾಯ್ಕ, ಗಿರೀಶ್ ನಾಯ್ಕ ಚಿತ್ತಾರ, ಉದಯ ನಾಯ್ಕ ವಕೀಲ, ದಾವುದ್ ಸಾಬ, ಮೋಹನ್ ಮೇಸ್ತ, ರಜಾಕ್ ಸಾಬ, ಬಾಲಚಂದ್ರ ಶೆಟ್ಟಿ ಅಚಿವೆ, ರಮಾನಂದ ನಾಯ್ಕ ಅಚಿವೆ, ರಾಜೇಶ್ ಮಿತ್ರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top