ಶಿರಸಿ: ತಾಲೂಕಿನ ಬಿಸಲಕೊಪ್ಪ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮ ಮೇ.10ರಂದು ನಡೆಯಲಿದೆ ಎಂದು ಸೊಸೈಟಿ ಅಧ್ಯಕ್ಷ ಎಸ್.ಎನ್.ಭಟ್ಟ ಬಿಸಲಕೊಪ್ಪ ತಿಳಿಸಿದರು.
ಅವರು ಬಿಸಲಕೊಪ್ಪದಲ್ಲಿ ಶನಿವಾರ ಹಮ್ಮಿಕೊಂಡ ಸುದ್ದಿಗೋಷ್ಟಿಯಲ್ಲಿ ಪಾಲ್ಗೊಂಡು ಮಾತನಾಡಿದರು.
1921ರಂದು ಆರಂಭಗೊಂಡ ಸೊಸೈಟಿ 101ನೇ ವರ್ಷದಲ್ಲಿದೆ. ಕೋವಿಡ್ ಕಾರಣದಿಂದ ಈ ವರ್ಷ ಶತಮಾನೋತ್ಸವ ನಡೆಸಲಾಗುತ್ತಿದೆ. ರೈತರಿಗೆ ಅಗತ್ಯವಾದ ಕಿರಾಣಿ, ಗೊಬ್ಬರ ಕೂಡ ನೀಡಲಾಗುತ್ತದೆ. ಹಸಿ ಅಡಿಕೆ ವ್ಯಾಪಾರ, ಭತ್ತದ ಇತರ ವ್ಯಾಪಾರಕ್ಕೆಅನುಕೂ ಕೂಡ ಮಾಡಲಾಗುತ್ತದೆ. ಅನೇಕ ಯೋಜನೆಗಳ ಮೂಲಕ ರೈತರಿಗೆ ಸೊಸೈಟಿ ಆಪ್ತವಾಗಲು ನೆರವಾಗಲಿದೆ ಎಂದರು.
ಕಳೆದ ಸಲ 38 ಲಕ್ಷ ರೂ. ಲಾಭವಾಗಿದೆ. ಎಲ್ಲ ವ್ಯವಹಾರದಲ್ಲೂ ಉನ್ನತಿ ಆಗಿದೆ. ಶೇರು 1179, ಶೇರು ಬಂಡವಾಳ 1.54 ಕೋ.ರೂ ಇದೆ. ಸಾಲ ನೀಡಿದ್ದು 21.18 ಕೋ.ರೂ ಸಾಲ ನೀಡಲಾಗಿದೆ. ಶೇ.96 ಸಾಲ ವಸೂಲಾತಿ ಆಗಿದೆ. ಮನೆಮನೆಗೆ ಹೋಗಿ ಏಕ ಗವಾಕ್ಷಿಯಾಗಿ ಸಾಲಮನ್ನಾ ಮಾಡಲಾಗಿದೆ. ಕಿರಾಣಿ ಸ್ಟೀಲು, ಜವಳಿ, ಗೊಬ್ಬರ ಸೇರಿ 4 ಕೋ.ರೂ. ವಹಿವಾಟಾಗಿದೆ.
ಶತಮಾನೋತ್ಸವ ಹಿನ್ನಲೆಯಲ್ಲಿ ಹೊಸ ಕಟ್ಟಡ ಉದ್ಘಾಟಿಸಲಾಗುತ್ತಿದೆ. ಸಾಲಗಾರರಿಗೆ ಈ ಮುಂಚಿಗಿಂತ ಬಡ್ಡಿ ಕಡಿಮೆ ಮಾಡಲಾಗಿದೆ ಎಂದರು.
ಶತಮಾನೋತ್ಸವ ಆಚರಣೆಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದು, ನೂತನ ಕಟ್ಟಡವನ್ನು ಸಚಿವ ಎಸ್.ಟಿ ಸೋಮಶೇಖರ ಉದ್ಘಾಟಿಸಿದ್ದಾರೆ. ಸಂಘಕ್ಕೆ ಸೇವೆ ಸಲ್ಲಿಸಿದ ಅಧ್ಯಕ್ಷರಿಗೆ ಸಚಿವ ಶಿವರಾಮ ಹೆಬ್ಬಾರ ಸನ್ಮಾನ ನಡೆಸಲಿದ್ದಾರೆ. ಅಧ್ಯಕ್ಷತೆಯನ್ನು ಎಸ್.ಎನ್.ಭಟ್ ಬಿಸಲಕೊಪ್ಪ ವಹಿಸಿಕೊಳ್ಳಲಿದ್ದಾರೆ. ಪ್ರಮುಖರಾದ ವಿ.ಎಸ್.ಪಾಟೀಲ, ಶಿವಕುಮಾರ ಗೌಡ, ಸುನೀಲ ನಾಯ್ಕ, ರಾಘವೇಂದ್ರ ನಾಯ್ಕ, ನಿಂಗರಾಜ ಎಸ್ ಪಾಲ್ಗೊಳ್ಳುವರು.
ಮಧ್ಯಾಹ್ನ 3.30ಕ್ಕೆ ಶತಪಥ ಸ್ಮರಣ ಸಂಚಿಕೆಯನ್ನು ಸಂಸದ ಅನಂತಕುಮಾರ ಹೆಗಡೆ ಉದ್ಘಾಟಿಸಲಿದ್ದಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪ್ರಮುಖರಾದ ಶಾಂತಾರಾಮ ಸಿದ್ದಿ, ಗಣಪತಿ ಉಳ್ವೆಕರ, ಎಸ್.ವಿ.ಸಂಕನೂರು, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ವಿ.ಎನ್.ಭಟ್ಟ ಅಳ್ಳಂಕಿ, ಜಿ.ಎಂ.ಹೆಗಡೆ ಹುಳಗೋಳ, ಶಾಂತಾರಾಮ ಹೆಗಡೆ ಶೀಗೆಹಳ್ಳಿ , ಶಂಭುಲಿಂಗ ಹೆಗಡೆ ಪಾಲ್ಗೊಳ್ಳಲಿದ್ದಾರೆ. ಬಳಿಕ ಚಂದ್ರಹಾಸ ಚರಿತ್ರೆ ಯಕ್ಷಗಾನ ನಡೆಯಲಿದೆ ಎಂದರು.
ಈ ವೇಳೆ ಉಪಾಧ್ಯಕ್ಷ ಟಿ.ಎಂ.ಅಶೋಕ ಕುಪ್ಫಳ್ಳಿ, ವಿ.ಎಂ.ಹೆಗಡೆ ಬಿಸಲಕೊಪ್ಪ, ಪದ್ಮನಾಭ ಭಟ್, ಸತೀಶ ಹೆಗಡೆ, ತಿಮ್ಮಪ್ಪ ಹೆಗಡೆ ದಾನಂದಿ, ಮಹೇಂದ್ರ ಸಾಲೆಕೊಪ್ಪ, ಹೂವಾ ಮಳಲಗಾಂವ, ಪರಶುರಾಮ ಹಸ್ಲರ, ಕಾರ್ಯದರ್ಶಿ ಅಭಿಷೇಕ ಹೆಗಡೆ ಕಾಟಿಮನೆ ಇತರರು ಇದ್ದರು.