• Slide
    Slide
    Slide
    previous arrow
    next arrow
  • ಫೇಸ್ಬುಕ್ ಗ್ರುಪ್ ಸೌಹಾರ್ದ ಬಳಗದ ಕಾರ್ಯಕ್ರಮ ಯಶಸ್ವಿ

    300x250 AD

    ಶಿರಸಿ: ಸೌಹಾರ್ದ ವೇದಿಕೆಯ ಸದಸ್ಯರ ಸಮ್ಮೇಳನವು ಶಿರಸಿಯ ಅರಣ್ಯ ಇಲಾಖೆ ಸಭಾಂಗಣದಲ್ಲಿ  ನಡೆಯಿತು. ಸಾಮಾಜಿಕ ಜಾಲತಾಣದಲ್ಲಿ ಬಾಲಚಂದ್ರ ಒಡ್ಲಮನೆ ಅವರು ಪ್ರಾರಂಭಿಸಿದ ಈ ಗುಂಪು ಹವ್ಯಕರ ಭಾಷೆ ಸಂಸ್ಕೃತಿ ಸಾಹಿತ್ಯ ಇತ್ಯಾದಿ ಪ್ರತಿಭೆಗಳಿಗೆ ಒಂದು ವೇದಿಕೆಯಾಗಿದೆ.

    ವೇದಿಕೆಯ ವಿವರ ಉದ್ದೇಶ ತಿಳಿಸಿ, ಕಾರ್ಯಕ್ರಮಕ್ಕೆ ಬಾಲಚಂದ್ರ ಭಟ್ ಓಡ್ಲಮನೆ ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಹಿರಿಯ ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ” ಪ್ರಸ್ತುತ ಸಮಾಜದಲ್ಲಿ ಹಾಗೂ ಹವ್ಯಕ ಸಮುದಾಯದಲ್ಲಿ ಸೌಹಾರ್ದತೆಗೆ ಪೂರಕ ವೇದಿಕೆ. ಇಂತಹ ಚಟುವಟಿಕೆಗಳು ನಡೆಯಬೇಕು” ಎಂದು ಹೇಳಿದರು.ಇನ್ನೋರ್ವ ಅತಿಥಿ ಡಾ. ಅಜಿತ್ ಹರೀಶೆ, ಇಂದಿನ ಕಾಲಘಟ್ಟದಲ್ಲಿನ ಸಾಹಿತ್ಯ  ಮತ್ತು ಇಂದಿನ ಬರಹಗಾರರು  ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ವಿವರಿಸಿದರು.

    300x250 AD

    ಹಿರಿಯ ಸದಸ್ಯ ಎಂ ಜಿ ಹೆಗಡೆ ವಂದಿಸಿದರು. ಇದೇ ಸಂದರ್ಭದಲ್ಲಿ ವೇದಿಕೆಯ ಮೂವರು ಹಿರಿಯರಿಗೆ ಸನ್ಮಾನ, ವಿವಿಧ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಸದಸ್ಯರಾದ ವೆಂಕಟಾಚಲ ಭಟ್ಟ ಮತ್ತು ಶಮಾಚಂದ್ರ ಕಾರ್ಯಕ್ರಮ ನಿರೂಪಣೆ ಮಾಡಿದರು. ನಂತರ ಸದಸ್ಯರಿಂದ ಸಂಗೀತ ಕಾರ್ಯಕ್ರಮ , ವಿವಿಧ ರೀತಿಯ ಮನರಂಜನಾ ಆಟಗಳು ಇತ್ಯಾದಿ ಕಾರ್ಯಕ್ರಮ ನಡೆಯಿತು. ಆಡ್ಮಿನ್ ಗಳಾದ ಶುಭಾ ನಾಗರಾಜ, ಸುಮನಾ ಶಿವರಾಮ ಭಟ್ಟ, ಎಲ್ ಎನ್ ಭಟ್ಟ, ವಸುಮತಿ ಭಟ್ಟ, ಹಾಗೂ ಬಿಂದು ಹೆಗಡೆ ಕಾರ್ಯಕ್ರಮ ಸಂಘಟಿಸಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top