• first
  second
  third
  Slide
  previous arrow
  next arrow
 • ಕಲಿಕಾ ಚೇತರಿಕೆ ತರಬೇತಿ ಉದ್ಘಾಟನೆ, ಮಾಹಿತಿ ಪತ್ರ ಬಿಡುಗಡೆ

  300x250 AD

  ಅಂಕೋಲಾ: ಕಲಿಕಾ ಚೇತರಿಕೆ ಕಾರ್ಯಕ್ರಮ ಇಲಾಖೆಯ ಮಹಾತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ. ತರಬೇತಿಯ ಸಂಪೂರ್ಣ ಸದುಪಯೋಗವನ್ನು ತರಗತಿ ಕೋಣೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ ಹೇಳಿದರು.

  ತಾಲೂಕಿನ ಶಿಕ್ಷಕರಿಗಾಗಿ ‘ಕಲಿಕಾ ಚೇತರಿಕೆ ತರಬೇತಿ ಕಾರ್ಯಕ್ರಮ ಹಾಗೂ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದರಿಂದ ಆಗುವ ಲಾಭಗಳ ಕುರಿತ ಮಾಹಿತಿ ಪತ್ರ ಬಿಡುಗಡೆ’ ಕಾರ್ಯಕ್ರಮ ತಾಲೂಕಿನ ಜೈಹಿಂದ್ ಹೈಸ್ಕೂಲಿನಲ್ಲಿ ನಡೆಯಿತು.

  ಕಲಿಕಾ ಚೇತರಿಕೆ ತರಬೇತಿ ಉದ್ಘಾಟನೆ ಹಾಗೂ ಮಾಹಿತಿ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಂಗಳಲಕ್ಷ್ಮೀ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಂಕೋಲಾ ಘಟಕವು ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದರಿಂದ ಆಗುವ ಲಾಭಗಳ ಕುರಿತು ಪ್ರಕಟಿಸಿರುವ ಮಾಹಿತಿ ಪತ್ರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

  ಕಲಿಕಾ ಚೇತರಿಕೆ ತರಬೇತಿ ಕಾರ್ಯಕ್ರಮ ಉತ್ತರ ಕನ್ನಡ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಗಳ ನೋಡೆಲ್ ಅಧಿಕಾರಿ, ಸಿಇಟಿ ಬೆಳಗಾವಿಯ ರೀಡರ್ ನಾಗರಾಜ ನಾಯಕ ಕಲಿಕಾ ಚೇತರಿಕೆ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಮಹತ್ವವನ್ನು ವಿವರಿಸಿದರು.

  300x250 AD

  ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಹರ್ಷಿತಾ ನಾಯಕ ಮಾತನಾಡಿ, ಕಲಿಕೆಯ ಕೊರತೆಯನ್ನು ನೀಗಿಸಲು ಕಲಿಕಾ ಚೇತನಾ ಕಾರ್ಯಕ್ರಮ ಬಹಳ ಉಪಯುಕ್ತವಾಗಿದೆ. ತಾಲೂಕಿನ ಎಲ್ಲ ಶಿಕ್ಷಕರು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದರು.

  ಕಲಿಕಾ ಚೇತರಿಕೆ ತರಬೇತಿ ಸಂಪನ್ಮೂಲ ವಕ್ತಿಗಳಾದ ವೆಂಕಟೇಶ ಗೌಡ ಸ್ವಾಗತಿಸಿದರು. ಬಿ.ಎಸ್.ಗೌಡ ನಿರ್ವಹಿಸಿದರು. ಶಿವಾನಂದ ಗೌಡ ವಂದಿಸಿದರು. ಶಿಕ್ಷಕಿ ಅಕ್ಷಯಾ ಗುನಗಾ ಪ್ರಾರ್ಥಿಸಿದರು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ.ನಾಯಕ ಹೊಸ್ಕೇರಿ, ಪ್ರಧಾನ ಕಾರ್ಯದರ್ಶಿ ರಾಜು ಎಚ್.ನಾಯಕ, ಗೌರವಾಧ್ಯಕ್ಷ ವಿಜಯ ಆರ್.ನಾಯಕ, ಉಪಾಧ್ಯಕ್ಷ ಮಂಜುನಾಥ ವಿ.ನಾಯಕ, ಭಾರತಿ ಬಿ.ನಾಯಕ, ಸಂಘದ ಪದಾಧಿಕಾರಿಗಳಾದ ಲಕ್ಷ್ಮೀ ನಾಯಕ, ಸವಿತಾ ಗಾಂವಕರ, ಎಸ್.ಆರ್.ಪಿ ದೀಪಾ ನಾಯಕ, ಜಿಲ್ಲಾ ಪದಾಧಿಕಾರಿಗಳಾದ ಮಂಜುನಾಥ ಬಿ.ನಾಯಕ, ಶೇಖರ ಗಾಂವಕರ ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Back to top