ಯಲ್ಲಾಪುರ: ಪಟ್ಟಣದ ರವೀಂದ್ರ ನಗರದ ಶ್ರೀಶಕ್ತಿ ಗಣಪತಿ ದೇವಸ್ಥಾನದ ಆವಾರದಲ್ಲಿ ಮೇ 7ರಂದು ಸಂಜೆ 4 ಗಂಟೆಗೆ ಕಣ್ಣಿಮನೆ ಶಾರದಾಂಬಾ ಸಂಗೀತ ಸಂಸ್ಥೆ ಆಶ್ರಯದಲ್ಲಿ ಶಿವರಾಮ ಭಟ್ಟ ವಿರಚಿತ `ಹನಿಧಾರೆ’ ಕವನ ಸಂಕಲನದ ಲೋಕಾರ್ಪಣೆ ಹಾಗೂ ಸಂಗೀತ ಸಂಜೆ ಕಾರ್ಯಕ್ರಮಗಳು ನಡೆಯಲಿವೆ.
ಬಿಸಗೋಡ್ ಪ್ರೌಡಶಾಲಾ ಶಿಕ್ಷಕ ಸತೀಶ ಯಲ್ಲಾಪುರ ಕಾರ್ಯಕ್ರಮವನ್ನು ಉದ್ಘಾಟಿಸುವರು. ಅತಿಥಿಗಳಾಗಿ ಟಿ.ಎಂ.ಎಸ್.ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ, ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಹಿಂದೂಸ್ತಾನಿ ಗಾಯಕಿ ವಾಣಿ ರಮೇಶ ಹೆಗಡೆ ಪಾಲ್ಗೊಳ್ಳುವರು.
ಸಭಾ ಕಾರ್ಯಕ್ರಮದ ತರುವಾಯ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಶ್ರುತಿ ಭಟ್ಟ, ಗಣಪತಿ ಹೆಗಡೆ ಯಲ್ಲಾಪುರ (ಗಾಯನ), ಉಮೇಶ ಬೀಗಾರ್, ಸತೀಶ ಭಟ್ಟ ಹೆಗ್ಗಾರ (ಸಂವಾದಿನಿ), ನಾರಾಯಣ ಭಟ್ಟ, ಎನ್.ಜಿ.ಹೆಗಡೆ ಹೊನ್ನಾವರ (ತಬಲಾ) ಕಲಾವಿದರಾಗಿ ಪಾಲ್ಗೊಳ್ಳಲಿದ್ದಾರೆ.