ಯಲ್ಲಾಪುರ: ವೃತ್ತಿಜೀವನದೊಂದಿಗೆ ಸೇವೆಯನ್ನು ಕೂಡ ಒಂದು ಭಾಗವೆಂದು ಪರಿಗಣಿಸಿರುವ ಯಲ್ಲಾಪುರ ತಾಲೂಕು ಆಟೋ ಚಾಲಕ- ಮಾಲೀಕರ ಸಂಘದ ನೂತನ ಅಧ್ಯಕ್ಷರಾಗಿ ಸಂಘದ ಜಿಲ್ಲಾ ಅಧ್ಯಕ್ಷ ಸಂತೋಷ ನಾಯ್ಕ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.
ಪಟ್ಟಣದ ವಿವಿಧ ಆಟೊ ಸ್ಟ್ಯಾಂಡ್ ಚಾಲಕ ಮಾಲಕರ ಸಂಘದ ಸಭೆಯಲ್ಲಿ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಚಂದ್ರು ಭೋವಿ, ಕಾರ್ಯದರ್ಶಿಯಾಗಿ ಪರಮೇಶ್ವರ್ ಕಣವಿ, ಖಜಾಂಚಿಯಾಗಿ ಉಮೇಶ ಪಟಗಾರ ಹಾಗೂ ಸದಸ್ಯರಾಗಿ ಅಬ್ದುಲ್ ರಶೀದ್, ರಮೇಶ ನಾಯ್ಕ, ಗುರುರಾಜ ಭಟ್, ರವಿ ಗಾಂವ್ಕರ್, ಲಕ್ಷ್ಮೀಕಾಂತ ಬೋವಿ, ವಿಲಾಸ ಕಸ್ತೂರ್, ಬಾಬಾ, ಜುಬೇರ್, ಅಬ್ದುಲ್ ಖಾದರ್ ಮುಂತಾದವರು ಆಯ್ಕೆ ಮಾಡಲಾಯಿತು.