ಶಿರಸಿ; ರಸ್ತೆ ದಾಟುತ್ತಿದ್ದ ಮಹಿಳೆಯೋರ್ವಳಿಗೆ ಬೈಕ್ ಬಡಿದು ಸಾವನ್ನಪ್ಪಿದ ದುರ್ಘಟನೆ ನಗರದ ವಿಕಾಸಾಶ್ರಮ ಬಳಿ ನಡೆದಿದೆ.
ಮರಾಠಿಕೊಪ್ಪ ಶಿವಮಂದಿರ ಬಳಿಯ ನಿವಾಸಿ ರಾಜೇಶ್ವರಿ ರಾಮ ನಾಯ್ಕ್(೫೬) ಮೃತ ದುರ್ದೈವಿಯಾಗಿದ್ದು ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಬೈಕ್ ಡಿಕ್ಕಿ ಹೊಡೆದು,ಬೈಕ್ ಸವಾರ ಪರಾರಿಯಾಗಿದ್ದಾನೆ.
ಸಿ ಪಿ ಐ ರಾಮಚಂದ್ರ ನಾಯಕ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿ. ಎಸ್.ಐ. ಭೀಮಾಶಂಕರ್ ಹಾಗೂ ಅನಿಲ್ ಕುಮಾರ್ ತೀವ್ರ ತನಿಖೆ ಆರಂಭಿಸಿದ್ದಾರೆ.