
ಯಲ್ಲಾಪುರ/ಅಂಕೋಲಾ: ಅಂಕೋಲಾ ತಾಲೂಕಿನ ಸುಂಕಸಾಳ-ಅಗಸೂರು ಬಳಿಯ ಹೊಟೆಲ್ ನವಮಿಗೆ ಬೆಂಗಳೂರಿನಿಂದ ಬಂದ ನಾಲ್ವರು ಸಿಲುಕಿ ಹಾಕಿಕೊಂಡಿದ್ದಾರೆ.
ಹೋಟೆಲ್‍ನ 2ನೇ ಮಹಡಿಯಲ್ಲಿದ್ದ ಇವರು, ಕಾರು ಕೊಚ್ಚಿ ಹೋಗಂದತೆ ಹಗ್ಗದಿಂದ ಕಟ್ಟಿ ಹಾಕಿದ್ದರೂ, ನೀರು ಏರುತ್ತಿರುವ ರಭಸಕ್ಕೆ ಕಾರು ಕೊಚ್ಚಿಕೊಂಡು ಹೋಗಿದೆ. ಜಿಲ್ಲಾಧಿಕಾರಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಏರ್‍ಲಿಪ್ಟ್ ಮಾಡಲು ಪ್ರಯತ್ನ ನಡೆಸುವುದಗಿ ತಿಳಿಸಿದ್ದಾರೆ.
ಯಲ್ಲಾಪುರ-ಶಿರಸಿ-ಮುಂಡಗೋಡ ಭಾಗದಲ್ಲೂ ಭಾರೀ ಮಳೆ ಸುರಿಯುತ್ತಿರುವ ಕಾರಣ ಗಂಗಾವಳಿ ನದಿ ಉಕ್ಕಿ ಹರಿಯುತ್ತಿದ್ದು, ರಾಮನಗುಳಿ, ಗುಳ್ಳಾಪುರ, ಶೇವ್ಕಾರ, ಕೈಗಡಿ, ಕಲ್ಲೇಶ್ವರ, ಡೋಂಗ್ರಿಯ ಹಲವು ಮನೆಗಳು ಜಲಾವೃತಗೊಂಡಿದೆ.
ಕದ್ರಾ ಜಲಾಶಯದ 11 ಗೇಟ್ ಪೈಕಿ 10 ಗೇಟ್ ತೆರೆದು 81285 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.