• Slide
    Slide
    Slide
    previous arrow
    next arrow
  • ಬಗೆಹರಿಯಲಾರದ ಅರಣ್ಯವಾಸಿಗಳ ಸಮಸ್ಯೆ- ಭೂಮಿ ಹಕ್ಕಿಗೆ ಕಾನೂನಾತ್ಮಕ ಗೊಂದಲ

    300x250 AD

    ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳಿಗೆ ಸ್ಪಂಧಿಸಿ ನಿರಂತರ 30 ವರ್ಷ ವಿವಿಧ ರೀತಿಯ ಸಂಘಟನೆ, ಹೋರಾಟ, ಆಂದೋಲನ ಮೂಲಕ ಅರಣ್ಯವಾಸಿಗಳ ಏಕತೆ ಮತ್ತು ಹೋರಾಟದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಕಾರ್ಯನಿರ್ವಹಿಸಿದರೂ, ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಕಾನೂನಾತ್ಮಕ ತೊಡಕು, ಮಂಜೂರಿಗೆ ಸಂಬಂಧ ಪಟ್ಟಂತೆ ಅರಣ್ಯವಾಸಿಗಳಿಗೆ ಅರಣ್ಯ ಹಕ್ಕುಗಳು ಇಂದಿಗೂ ಮರಿಚಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಮೇ 7 ಇಂದು ಹೊನ್ನಾವರದಲ್ಲಿ ಸಂಘಟಿಸಲಾದ ಅರಣ್ಯವಾಸಿಗಳನ್ನ ಉಳಿಸಿ- ಜಾಥವು ಮುಂದಿನ ಹೋರಾಟದಲ್ಲಿ ಮಹತ್ವ ಹೆಜ್ಜೆಯನ್ನು ಇಟ್ಟಿದೆ ಎಂದರೆ ತಪ್ಪಾಗಲಾರದು.

    ವಾಸ್ತವ್ಯ ಹಾಗೂ ಸಾಗುವಳಿಗಾಗಿ ತಲತಲಾಂತರದಿಂದ ಅರಣ್ಯ ಭೂಮಿಯ ಮೇಲೆ ಅವಲಂಭಿತರಾಗಿರುವ ಜಿಲ್ಲೆಯ ಅರಣ್ಯವಾಸಿಗಳಿಗೆ ಸಾಗುವಳಿಯ ಹಕ್ಕಿಗಾಗಿ ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದು ಒಂದುವರೆ ದಶಕಗಳಾದರೂ ಇಂದಿಗೂ ಸಾಗುವಳಿ ಹಕ್ಕಿನ ನೀರಿಕ್ಷೆಯಲ್ಲಿ ಅರಣ್ಯವಾಸಿಗಳು ಇರುವುದು ವಿಷಾದಕರ. ಪೂರ್ಣ ಪ್ರಮಾಣದ ಇಚ್ಛಾಶಕ್ತಿ ಮತ್ತು ಕಾನೂನಿನ ಅನುಷ್ಟಾನದಲ್ಲಿನ ವೈಫಲ್ಯತೆ ಕಾರಣವಾಗಿದೆ ಎಂದು ಹೋರಾಟಗಾರರು ವಿಶ್ಲೇಷಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಇಂದು ಮೇ 7 ರಂದು ಹೊನ್ನಾವರದಲ್ಲಿ ಸಂಘಟಿಸಲಾಗುತ್ತಿರುವ ಅರಣ್ಯವಾಸಿಗಳನ್ನ ಉಳಿಸಿ ಎಂಬ ಜಾಥವು ಅರಣ್ಯವಾಸಿಗಳ ಸಾಗುವಳಿ ಹಕ್ಕಿಗಾಗಿ ಮುಂದಿನ ಹೋರಾಟದ ದಿಕ್ಸೂಚಿ ಆಗುವುದೆಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

    ಹೋರಾಟಗಾರರ ವೇದಿಕೆಯು ಸ್ವತಂತ್ರ ‘ಹೋರಾಟದ ವಾಹಿನಿ’ ಯ ಮೂಲಕ ಜಿಲ್ಲಾದ್ಯಂತ ಈಗಾಗಲೇ 400 ಕ್ಕೂ ಮಿಕ್ಕಿ ಹಳ್ಳಿಗಳಲ್ಲಿ ಸುಮಾರು ಐದು ಸಾವಿರ ಕೀ.ಮೀ ಸಂಚರಿಸಿ ಅರಣ್ಯವಾಸಿಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅರಣ್ಯವಾಸಿಗಳನ್ನ ಉಳಿಸಿ- ಜಾಥದ ವಿಶೇಷ ಎಂದರೇ ತಪ್ಪಾಗಲಾರದು.

    300x250 AD

    ಶೇ 78.20 ರಷ್ಟು ತಿರಸ್ಕಾರ:
    ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಗ್ರಾಮೀಣ ಭಾಗದ ಅತಿಕ್ರಮಣದಾರರು ವಾಸ್ತವ್ಯ ಹಾಗೂ ಸಾಗುವಳಿಗಾಗಿ ಸಲ್ಲಿಸಿರುವ ಒಟ್ಟೂ ಅರ್ಜಿ 89167 ಅವುಗಳಲ್ಲಿ 69733 ಅರ್ಜಿಗಳು ತಿರಸ್ಕಾರವಾಗಿದ್ದು ತಿರಸ್ಕಾರವಾಗಿರುವ ಅರ್ಜಿಗಳು ಶೇ 78.20 ರಷ್ಟು ಆಗಿವೆ.

    ಹಕ್ಕು ಪತ್ರ ಶೇ 3.2:
    ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಜಿಲ್ಲೆಯಲ್ಲಿ ಬುಡಕಟ್ಟು 1331 ಪಾರಂಪರಿಕ ಅರಣ್ಯವಾಸಿಗಳಿಗೆ 398 ಹಾಗೂ ಸಮುದಾಯ ಉದ್ದೇಶಕ್ಕೆ 1126 ಒಟ್ಟೂ 2852 ಹೀಗೆ ಶೇಕಡವಾರು ಬಂದಿರುವಂಥ ಗ್ರಾಮೀಣ ಭಾಗದ ಅರ್ಜಿಯಲ್ಲಿ ಶೇ 3.2 ರಷ್ಟು ಮಾತ್ರ ಹಕ್ಕು ಪ್ರಾಪ್ತವಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top